11:39 AM Wednesday 20 - August 2025

‘ರೋಡ್ ಸುರಕ್ಷಾ ಬಂಧನ್’ | ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡ ಯುವಕನಿಂದ ಏಕಾಂಗಿ ಪ್ರತಿಭಟನೆ

road suraksha bandhan
11/08/2022

ಮಂಗಳೂರು: ಮಂಗಳೂರಿನ ರಸ್ತೆ ಅವ್ಯವಸ್ಥೆಗೆ ಬಲಿಯಾದ ಯುವಕನ ಸ್ನೇಹಿತ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ‘ರೋಡ್ ಸುರಕ್ಷಾ ಬಂಧನ್’ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾನೆ.

ಲಿಖಿತ್ ರೈ ಎಂಬವರು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರಿನಲ್ಲಿ ರೋಡ್ ಸುರಕ್ಷಾ ಬಂಧನ್ ಎಂಬ ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಲಿಖಿತ್ ರೈ ಸ್ನೇಹಿತ ಅತೀಶ್ ಇತ್ತೀಚಿಗೆ ರಸ್ತೆಯ ಅವ್ಯವಸ್ಥೆಯಿಂದ ಅಪಘಾತದಲ್ಲಿ ಬಲಿಯಾಗಿದ್ದರು. ನಗರದಲ್ಲಿರೋ ಹೊಂಡ ಗುಂಡಿಗಳ ರಸ್ತೆಗಳ ಅವ್ಯವಸ್ಥೆಯಿಂದ ತನ್ನ ಸ್ನೇಹಿತ ಸಾವನ್ನಪ್ಪಿರುವುದಾಗಿ ಲಿಖಿತ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಅವ್ಯವಸ್ಥೆಯಿಂದ ನಡೆಯುವ ಸಾವು, ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ ಲಿಖಿತ್ ರೋಡ್ ಸುರಕ್ಷಾ ಬಂಧನ್ ಎಂಬ ಫಲಕ ಹಿಡಿದು ಆಕ್ರೋಶ ಹೊರ ಹಾಕಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version