ರಾಜಾ, ಹಾಯ್ ಬೇಬಿ ಎಂದ ಕೂಡಲೇ ಓಡೋಡಿ ಬಂದ ದಸರಾ ಆನೆ ರೋಹಿತ್!!

elephant
03/09/2023

ಚಾಮರಾಜನಗರ: ಹಾಯ್ ಬೇಬಿ, ರಾಜಾ ಎಂದ ಕರೆದ ಕೂಡಲೇ ದಸರಾಗೆ ಆಯ್ಕೆಯಾಗಿರುವ ಬಂಡೀಪುರದ ರೋಹಿತ್ ಆನೆ ಓಡೋಡಿ ಬಂದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಗುರುವಾರ ಮೈಸೂರಿಗೆ ದಸರಾ ಆನೆಗಳು ತೆರಳುವ ಮುನ್ನ ಮೇಯುತ್ತಿದ್ದ ರೋಹಿತ್

ಜಯಚಾಮರಾಜ ಒಡೆಯರ ಮೊಮ್ಮಗಳು ಕರೆದ ಕೂಡಲೇ ಘೀಳಿಟ್ಟು ಓಡೋಡಿ ಬಂದು ಎಲ್ಲರನ್ನು ಅಚ್ಚರಿಗೆ ನೂಕಿದೆ. ದಿ‌. ವಿಶಾಲಾಕ್ಷಿದೇವಿ ಅವರು

ಅನಾಥವಾಗಿದ್ದ ಆರು ತಿಂಗಳ ಮರಿಯಾನೆಯನ್ನು ಬಂಡಿಪುರದ ತಮ್ಮ ರೆಸಾರ್ಟ್ ನಲ್ಲಿ 14 ವರ್ಷ ಸಾಕಿ ಅದಕ್ಕೆ ರೋಹಿತ್ ಎಂದು ನಾಮಕರಣವನ್ನು ಮಾಡಿದ್ದರು. ಅದಾದ ಬಳಿಕವೂ, ಆನೆ ಮರಿ ಜೊತೆ  ಈಗಲೂ ಅದೇ ಪ್ರೀತಿ ಇಟ್ಟುಕೊಂಡಿರುವ  ವಿಶಾಲಾಕ್ಷಿದೇವಿ ಅವರ ಮಗಳು ಶ್ರುತಿ ಕೀರ್ತಿ ದೇವಿ ಈಗಲೂ ತಿಂಗಳಿಗೊಮ್ಮೆ ಬಂದು ಆನೆ ನೋಡಿಕೊಂಡು ತೆರಳುತ್ತಾರೆ.

ದಸರಾಗೆ ಮೈಸೂರಿಗೆ ತೆರಳುವ ಮುನ್ನ ಶೃತಿ ಕೀರ್ತಿ ದೇವಿ ‘ ಹಾಯ್ ಬೇಬಿ, ರಾಜಾ’ ಎಂದು ಕರೆದ ಕೂಡಲೇ ಘೀಳಿಟ್ಟು ಓಡಿ ಬಂದಿರುವುದು ಮೈಸೂರು ರಾಜಮನೆತನ ಹಾಗೂ ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯ ತೋರಿದೆ. ರೋಹಿತ್ ಗೆ 17 ವರ್ಷಗಳಾಗಿದ್ದು ಹಿರಣ್ಯ ಎಂಬ ಆನೆ ಜೊತೆ ಮೈಸೂರಿಗೆ ಗುರುವಾರ ತೆರಳಿದೆ.

ಇತ್ತೀಚಿನ ಸುದ್ದಿ

Exit mobile version