ಅಬ್ಬಬ್ಬಾ: ಇಲಿಗಳನ್ನು ಹಿಡಿಯಲು 69 ಲಕ್ಷ ಹಣ ಖರ್ಚು ಮಾಡಿದ ರೈಲ್ವೆ ಇಲಾಖೆ..!

17/09/2023

ಭಾರತೀಯ ರೈಲ್ವೆ ಇಲಾಖೆಯು ಇಲಿಗಳನ್ನು ಹಿಡಿಯಲು ಲಕ್ಷ ಲಕ್ಷ ಹಣ ಖರ್ಚು ಮಾಡಿದೆ ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರು ಆರೋಪಿಸಿದ್ದಾರೆ.
ಈ ಕುರಿತು ಅವರು ಎಕ್ಸ್ ಮಾಡಿದ್ದು ಅದು ಈಗ ವೈರಲ್ ಆಗಿದೆ.

ಉತ್ತರ ರೈಲ್ವೆಯ ಲಕ್ನೋ ವಿಭಾಗವು 2020- 22ರ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಅವರು ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಂಜಯ್‌ ಸಿಂಗ್‌, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳ ಎಲ್ಲಿವೆ ಎಂದು ಪ್ರಶ್ನಿಸಿದ್ದಾರೆ.
ಕೇವಲ ಇಲಿಗಳನ್ನು ಹಿಡಿಯಲು ರೈಲ್ವೆ ಇಲಾಖೆಯು ಇಷ್ಟೊಂದು ಹಣ ಪೋಲು ಮಾಡಿದೆಯೇ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version