ರಷ್ಯಾದಲ್ಲಿ ಆಂತರಿಕ ಯುದ್ಧ: ಅಧ್ಯಕ್ಷ ಪುಟಿನ್ ರನ್ನು ಟಾರ್ಗೆಟ್ ಮಾಡಿದ್ಯಾಕೆ..?

24/06/2023

ರಷ್ಯಾದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ. ಅಧ್ಯಕ್ಷ ಪುಟಿನ್‌ರವರ ಬೆಂಬಲದಿಂದ ಆರಂಭವಾಗಿದ್ದ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಸದ್ಯ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ಈ ಪಡೆಯು ಸಶಸ್ತ್ರ ದಂಗೆಯನ್ನು ಆರಂಭಿಸಿದ್ದು ರಷ್ಯಾದ ಎರಡು ನಗರಗಳನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.

ಈ ಕುರಿತು ಪುಟಿನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ವ್ಯಾಗ್ನರ್ ಸೈನಿಕರ ಶಸ್ತ್ರಸಜ್ಜಿತ ದಂಗೆಯು ‘ಬೆನ್ನಿಗೆ ಇರಿತವಾಗಿದೆ’ ಮತ್ತು ಪ್ರಿಗೋಜಿನ್ ರಷ್ಯಾಕ್ಕೆ ‘ದ್ರೋಹ’ ಮಾಡಿದ್ದಾರೆ. ಅತಿರಂಜಿತ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಈ ದೇಶದ್ರೋಹಕ್ಕೆ ಕಾರಣವಾಗಿವೆ. ಇದರಲ್ಲಿ ಭಾಗಿಯಾದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ರಷ್ಯಾದ ಅಧ್ಯಕ್ಷರು ತಮ್ಮ ಭಾಷಣದ ಸಮಯದಲ್ಲಿ ತಪ್ಪು ಆಯ್ಕೆ ಮಾಡಿದ್ದಾರೆ ಮತ್ತು ದೇಶವು ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ವ್ಯಾಗ್ನರ್ ಪಡೆ ಹೇಳಿದೆ. ಪುಟಿನ್‌ರನ್ನು ಕೆಳಗಿಳಿಸುವ ಪ್ರತಿಜ್ಞೆ ಮಾಡಿರುವ ಆ ಪಡೆಯು ಸದ್ಯ ಮಾಸ್ಕೋನತ್ತ ತೆರಳುತ್ತಿದೆ ಎನ್ನಲಾಗಿದೆ.

ಮಾಸ್ಕೋದಲ್ಲಿ ರಷ್ಯಾದ ಮಿಲಿಟರಿಯು ತನ್ನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕಾರಣಕ್ಕಾಗಿ ನಾವು ದಂಗೆಯನ್ನು ಆರಂಭಿಸಿದ್ದೇವೆ ಎಂದು ಪ್ರಿಗೋಜಿನ್ ಹೇಳಿದ್ದಾರೆ. ‘ನಮ್ಮ ದಾರಿಗೆ ಅಡ್ಡಬರುವ ಎಲ್ಲವನ್ನೂ ನಾಶಮಾಡುತ್ತವೆ ಎಂದಿರುವ ಅವರು “ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಮೆರವಣಿಗೆ” ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version