8:02 AM Friday 11 - September 2026

ಸದನದಲ್ಲಿ ‘ಸಿಡಿ’ ‘ಸಿಡಿ’ ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು!

09/03/2021

ಬೆಂಗಳೂರು:  ಕಾಂಗ್ರೆಸ್ ಶಾಸಕ ಸದನದಲ್ಲಿ ತಮ್ಮ ಅಂಗಿ ಬಿಚ್ಚುವ ಮೂಲಕಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿದ್ದು, ಈ ವೇಳೆ ಸದನಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿದೆ.

ಹಕ್ಕುಚ್ಯುತಿ ಮಂಡನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಇದನ್ನು ವಿರೋಧಿಸಿದ ಕಾಂಗ್ರೆಸ್,  ಈ ಹಿಂದೆ ಗೂಳಿಹಟ್ಟಿ ಶೇಖರ್ ಸದನದಲ್ಲಿ ಬಟ್ಟೆ ಹರಿದು ಹಾಕಿದ ಸಂದರ್ಭದಲ್ಲಿ ಯಾವುದೇ ಕ್ರಮಕೈಗೊಳ್ಳದವರು ಈಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸದನ ಪ್ರಜಾಪ್ರಭುತ್ವದ ದೇಗುಲವಾಗಿದೆ. ಇಲ್ಲಿ ಅವರು ಬಟ್ಟೆ ಬಿಚ್ಚಿ, ಸಭಾಧ್ಯಕ್ಷರ ಬಗ್ಗೆ ಅತ್ಯಂತ ಅವಹೇಳನಾಕಾರಿ ಮಾಯುಗಳನ್ನಾಡಿದ್ದಾರೆ. ಇದರಿಂದ ಹಕ್ಕು ಚ್ಯುತಿ ಮಂಡನೆಯನ್ನು ಮಂಡಳಿಗೆ ಕಳುಹಿಸುತ್ತೇನೆ ಎಂದು ಸ್ಪೀಕರ್ ಹೇಳಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದ್ದು, ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಇದೇ ವೇಳೆ ಸಿಡಿ, ಸಿಡಿ ಎಂದು ಜೋರಾಗಿ ಘೋಷಣೆ ಕೂಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version