7:29 AM Saturday 18 - October 2025

ಮಹಾಕುಂಭ ಮೇಳ ಮುಗಿದ ಬಳಿಕ ಪಿಜ್ಜಾ ತಿನ್ನಲು ಬಂದ ಸಾಧುಗಳು!

sadhus
01/03/2025

ಪ್ರಯಾಗ್ ರಾಜ್:  ಮಹಾಕುಂಭ ಮೇಳ ಮುಗಿದ ಬಳಿಕ  ಕೆಲವು ಸಾಧುಗಳು ಡೋಮಿನೋಸ್ ಪಿಜ್ಜಾ ತಿನ್ನಲು ಬಂದಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಪ್ರಯಾಗ್ ರಾಜ್ ನಲ್ಲಿರುವ ಡೋಮಿನೋಸ್ ಔಟ್ ಲೇಟ್ ಗೆ ಮೂವರು ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದಾರೆ.

ಸಾಧುಗಳು ಪಿಜ್ಜಾ ತಿನ್ನಲು ಬಂದಿರುವ ವಿಡಿಯೋವನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,  ಪಿಜ್ಜಾ ತಿನ್ನಲು ಬಂದ ಸಾಧುಗಳು ಎಂದು ಟೈಟಲ್ ನೀಡಿದ್ದಾರೆ.

ವಿಡಿಯೋದಲ್ಲಿ ನಾಲ್ವರು ಸಾಧುಗಳು  ಪ್ರಯಾಗ್ ರಾಜ್ ನಲ್ಲಿರುವ ಡೋಮಿನೋಸ್ ಔಟ್ ಲೆಟ್ ನಲ್ಲಿ ಎಲ್ ಇಡಿ ಮೆನು ನೋಡುತ್ತಾ, ಆರ್ಡರ್ ಮಾಡಲು ಕಾಯುತ್ತಿರುವುದು ಕಂಡು ಬಂದಿದೆ.

ಸದ್ಯ ಈ ಘಟನೆ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಸಾಧುಗಳ ಪರವಹಿಸಿ ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

 

ಇತ್ತೀಚಿನ ಸುದ್ದಿ

Exit mobile version