“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

mangalore news
10/10/2021

ಮಂಗಳೂರು:  ಇಬ್ಬರು ಸಹೋದರರ ಮೇಲೆ 20ಕ್ಕೂ ಅಧಿಕ ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಅಜೀಮ್, ಆಶಿಕ್ ಹಲ್ಲೆಗೊಳಗಾದ ಸಹೋದರರು ಎಂದು ಗುರುತಿಸಲಾಗಿದೆ.  ಯಾವುದೋ  ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಅಜೀಮ್ ಗೆ ಅವಾಚ್ಯವಾಗಿ ನಿಂದಿಸಿದ್ದು, ಬಳಿಕ ಧೈರ್ಯವಿದ್ದರೆ ಗುಡ್ಡೆ ಮೈದಾನದ ಬಳಿಗೆ ಬರುವಂತೆ ಸವಾಲು ಹಾಕಿದ್ದಾನೆನ್ನಲಾಗಿದೆ.

ಆತ ಸವಾಲು ಹಾಕಿದ ವಿಚಾರವನ್ನು ಅಜೀಮ್ ತನ್ನ ಸಹೋದರ ಆಶಿಕ್ ಗೆ ಹೇಳಿದ್ದಾನೆ. ಆಶಿಕ್ ತನ್ನ ಸಹೋದರನನ್ನು ಕರೆದುಕೊಂಡು ಗುಡ್ಡೆ ಮೈದಾನಕ್ಕೆ ಹೋಗಿದ್ದು, ಈ ವೇಳೆ 20ಕ್ಕೂ ಅಧಿಕ ಮಂದಿಯ ತಂಡ ದೊಣ್ಣೆ, ಕಲ್ಲು, ಹೆಲ್ಮೆಟ್ ಗಳಿಂದ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ವರದಿಯಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಗಾಯಗೊಂಡಿರುವ ಸಹೋದರರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆ ಸಂಬಂಧ ಯಾವುದೇ ಮಾಹಿತಿ ಬಂದಿಲ್ಲ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಬ್ರೇಕಿಂಗ್ ನ್ಯೂಸ್: ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

ರೈಲಿನೊಳಗೆ ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಡಕಾಯಿತರು

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

ಪೊಲೀಸರ ದುಷ್ಕೃತ್ಯದಿಂದ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ

ಮಗನ ಅಂತ್ಯಸಂಸ್ಕಾರ ಮುಗಿದು ಕೆಲವೇ ಕ್ಷಣಗಳಲ್ಲಿ ತಾಯಿ ಹೃದಯಾಘಾತದಿಂದ ಸಾವು!

ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ

ಪಟಾಕಿ ಶಬ್ದಕ್ಕೆ ಬೆಚ್ಚಿ ಬಿದ್ದ ಆನೆ: ದಿಕ್ಕಾಪಾಲಾಗಿ ಓಡಿದ ಜನರು

ಇತ್ತೀಚಿನ ಸುದ್ದಿ

Exit mobile version