10:44 AM Tuesday 21 - October 2025

ಸಲಗ ಸ್ಟೈಲ್ ನಲ್ಲಿ ಜೈಲಿನಿಂದ ಹೊರ ಬಂದ ರೌಡಿಶೀಟರ್ ಮೂರೇ ದಿನದಲ್ಲಿ ಬರ್ಬರ ಹತ್ಯೆ!

anand
28/10/2021

ಬೆಂಗಳೂರು: ಮೂರು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ರೌಡಿಶೀಟರ್ ವೋರ್ವನನ್ನು  ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದಿದ್ದ ರೌಡಿಶೀಟರ್ ನನ್ನು ಸಾವು ಬೆನ್ನತ್ತಿ ಬಂದಿದ್ದು, ಬೆಂಗಳೂರಿನಲ್ಲಿ ಭೀಕರವಾಗಿ ಹತ್ಯೆಯಾಗಿದ್ದಾನೆ.

36 ವರ್ಷ ವಯಸ್ಸಿನ ಜೆ.ಸಿ.ಆನಂದ್ ಹತ್ಯೆಯಾದ ರೌಡಿಶೀಟರ್. 2016ರಲ್ಲಿ ಜೆಡಿಎಸ್ ಲೀಡರ್ ಆಗಿ ಈತ ಗುರುತಿಸಿಕೊಂಡಿದ್ದ ಎಂದು ವರದಿಗಳಿಂದ ತಿಳಿದು ಬಂದಿದೆ. 18 ವರ್ಷ ವಯಸ್ಸಿನಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಈತ, ರಿಲೀಸ್ ಆಗಿ ಮೂರೇ ದಿನದಲ್ಲಿ ದುಷ್ಕರ್ಮಿಗಳ ದಾಳಿ ನಡು ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಜೈಲಿನಿಂದ ಬಿಡುಗಡೆಯಾದ ವೇಳೆ ಸಲಗ ಸಿನಿಮಾದ ರೇಂಜ್ ಗೆ ಭರ್ಜರಿ ಎಂಟ್ರಿಕೊಟ್ಟಿದ್ದ ಆನಂದ್, ಏರಿಯಾದಲ್ಲಿ ಮತ್ತೆ ಹವಾ ಶುರು ಮಾಡಲು ಮುಂದಾಗಿದ್ದ. ಆದರೆ, ಜೈಲು ಶಿಕ್ಷೆ ಮುಗಿದರೂ ಹಳೆಯ ದ್ವೇಷ ತನ್ನ ಸುತ್ತಸುತ್ತುತ್ತಿದೆ ಎನ್ನುವುದನ್ನು ಮರೆತದ್ದೇ ಆತನ ಪ್ರಾಣಕ್ಕೆ ಮುಳುವಾಗಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version