9:00 AM Wednesday 20 - August 2025

ಸಂಭಾಲ್ ಹಿಂಸಾಚಾರ: ನೊಂದವರ ಜತೆ ಗಾಂಧಿ ಕುಟುಂಬದಿಂದ ಮಾತುಕತೆ

11/12/2024

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಸಂಭಾಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರನ್ನು ದೆಹಲಿಯಲ್ಲಿ ಭೇಟಿಯಾದರು. ಸೋನಿಯಾ ಗಾಂಧಿಯ ನಿವಾಸದಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿಯಾದ ಗಾಂಧಿ ಸಹೋದರರು, ಹಿಂಸಾಚಾರ ಮತ್ತು ಅದರ ಬಳಿಕದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಈ ಕುರಿತು ಕಾಂಗ್ರೆಸ್ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಇಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಸಂಭಲ್ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಸಂಭಲ್ ಘಟನೆಯು ಬಿಜೆಪಿಯ ದ್ವೇಷ ರಾಜಕೀಯದ ದುಷ್ಪರಿಣಾಮವಾಗಿದೆ. ಇದು ಶಾಂತಿಯುತ ಸಮಾಜಕ್ಕೆ ಮಾರಕವಾಗಿದೆ, ನಾವು ಈ ಹಿಂಸಾತ್ಮಕ ಮತ್ತು ದ್ವೇಷದ ಮನಸ್ಥಿತಿಯನ್ನು ಪ್ರೀತಿ ಮತ್ತು ಸಹೋದರತೆಯಿಂದ ಸೋಲಿಸಬೇಕು ಮತ್ತು ನಾವು ಎಲ್ಲಾ ಸಂತ್ರಸ್ತರ ಜೊತೆ ನಿಲ್ಲುತ್ತೇವೆ ಮತ್ತು ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಡಿ.4ರಂದು ಸಂಭಾಲ್‌ಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಹೊರಟ್ಟಿದ್ದರು. ಆದರೆ, ಅವರನ್ನು ದೆಹಲಿ-ಉತ್ತರ ಪ್ರದೇಶ ಗಡಿ ಘಾಝೀಪುರದಲ್ಲಿ ಸರ್ಕಾರ ತಡೆದಿತ್ತು.

ಪೊಲೀಸರು ತಡೆದಾಗ ರಾಹುಲ್ ಗಾಂಧಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ನಾಯಕನಾಗಿ ಸಂಭಾಲ್‌ಗೆ ಹೋಗುವುದು ನನ್ನ ಹಕ್ಕು ಎಂದಿದ್ದರು. ನಾನು ಪೊಲೀಸರು ಜೊತೆ ಸಹಕರಿಸಲು ಸಿದ್ದ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಒಬ್ಬನೇ ಹೋಗುತ್ತೇನೆ. ಪೊಲೀಸರ ಜೊತೆ ಹೋಗುತ್ತೇನೆ ಎಂದು ಹೇಳಿದ್ದರು.

ಮೊಘಲ್ ಕಾಲದ ಪುರಾತನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲು ಆದೇಶಿಸಿದ ಬಳಿಕ, ನವೆಂಬರ್ 19ರಿಂದ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನ. 24ರಂದು ಅಧಿಕಾರಿಗಳು ಎರಡನೇ ಸಮೀಕ್ಷೆಗೆ ಆಗಮಿಸಿದಾಗ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದ್ದದರು. ಅದು ಹಿಂಸಾಚಾರಕ್ಕೆ ತಿರುಗಿ ಭದ್ರತಾ ಪಡೆಗಳು ಗುಂಡು ಹಾರಿಸಿತ್ತು. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version