1:53 PM Thursday 29 - January 2026

ಚಿತ್ರಮಂದಿರಕ್ಕೆ 100% ಪ್ರೇಕ್ಷಕ ಪ್ರವೇಶಕ್ಕೆ ನಿರ್ಬಂಧ | ಸರ್ಕಾರದ ವಿರುದ್ಧ ಧ್ರುವ ಸರ್ಜಾ ಆಕ್ರೋಶ

03/02/2021

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ ಹಾಕಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರೋಧಿಸಿದ್ದು, ಕೇವಲ ಚಿತ್ರಮಂದಿರಗಳಿಗೆ ಮಾತ್ರವೇ ಏಕೆ ಈ ನಿರ್ಬಂಧ ಎಂದು ಪ್ರಶ್ನಿಸಿದ್ದಾರೆ.

ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ,  ಬಸ್ ನಲ್ಲೂ  ಫುಲ್ ರಶ್ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ನಿರ್ಬಂಧ ಎಂದು ಧ್ರುವ ಸರ್ಜಾ ಪ್ರಶ್ನಿಸಿದ್ದಾರೆ.  ಇತ್ತೀಚೆಗಷ್ಟೇ ನಟ ದರ್ಶನ್ ಅವರು ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬಳಿಕ ಇದೀಗ ಧ್ರುವ ಸರ್ಜಾ ಕೂಡ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೂ  ಅಂಬಾನಿಯ 5ಜಿಗಾಗಿ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದೊಂದು ದೊಡ್ಡ ಹಗರಣ ಎಂದು ದರ್ಶನ್ ಹೇಳಿದ್ದರು. ಧ್ರುವ ಸರ್ಜಾ ಬೇರಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಚಿತ್ರ ಮಂದಿರ ತೆರೆಯದೇ ಇರುವುದರ ವಿರುದ್ಧ ನೇರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

Exit mobile version