ಸೌದಿಯ ವಿವಿಧೆಡೆ ಭಾರೀ ಮಳೆಯ ಮುನ್ಸೂಚನೆ: ಸಚಿವಾಲಯ ಮುನ್ನೆಚ್ಚರಿಕೆ

27/04/2024
ಏಪ್ರಿಲ್ 28 ರ ಮಂಗಳವಾರದವರೆಗೆ ಸೌದಿಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು ಹೀಗಾಗಿ ಜನರು ಜಾಗರೂಕತೆ ಪಾಲಿಸಬೇಕು ಎಂದು ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಗುಡುಗು ಮತ್ತು ಸಿಡಿಲಿನಿಂದ ಕೂಡಿದ ಮಳೆ ಇದಾಗಲಿದ್ದು ಜನರು ಯಾವ ಕಾರಣಕ್ಕೂ ನಿರ್ಲಕ್ಷ ತೋರಬಾರದು ಎಂದು ಸರ್ಕಾರ ಎಚ್ಚರಿಸಿದೆ.
ರಿಯಾದ್, ಮಕ್ಕಾ, ಜಿಸಾನ್ ನಜರಾನ್ ಅಸೀರ್, ಅಲ್ ಬಾಹ, ಫಾಹಿಲ್, ಖಸೀಮ್ ಮತ್ತು ಪಶ್ಚಿಮ ಗಡಿಯ ಉದ್ದಕ್ಕೂ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ ನೆರೆಬರುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದಲ್ಲಿ ಇರುವವರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ ಮಳೆ ನೀರಿನಲ್ಲಿ ಯಾರೂ ಈಜುವ ಪ್ರಯತ್ನ ಮಾಡಬಾರದು ಎಂದು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth