ಹಜ್ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆ: ಸೌದಿ ಅರೇಬಿಯಾ ಸಚಿವಾಲಯ ಮುನ್ನೆಚ್ಚರಿಕೆ

ಹಜ್ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ 72° ಸೆಲ್ಸಿಯಸ್ ವರೆಗೆ ಬಿಸಿಲು ಅನುಭವವಾಗುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಆದ್ದರಿಂದ ಹಜ್ ಯಾತ್ರಿಕರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ತಮ್ಮ ಕೋಣೆಯಿಂದ ಹೊರಬರದಂತೆ ಜಾಗರೂಕತೆ ಪಾಲಿಸಬೇಕು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಕೋಣೆಗಳಿಂದ ಹೊರಬರುವಾಗ ಚಪ್ಪಲಿ ಮತ್ತು ಕೊಡೆಯನ್ನು ಕಡ್ಡಾಯವಾಗಿ ಉಪಯೋಗಿಸಬೇಕು ಎಂದು ಕೂಡ ಸೂಚನೆ ನೀಡಿದೆ.
ಈ ಬಾರಿಯ ಹಜ್ ಸಮಯದಲ್ಲಿ 45 ರಿಂದ 48 ಡಿಗ್ರಿ ಸೆಲ್ಸಿಯಸ್ ಬಿಸಿಲು ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮಶಾಇರದ ಕೆಲವು ಪರ್ವತ ಪ್ರದೇಶಗಳಲ್ಲಿ 72° ಸೆಲ್ಸಿಯಸ್ ಬಿಸಿಲಿನ ಅನುಭವವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಹೆಚ್ಚು ಸಮಯ ಸೂರ್ಯನ ಬೆಳಕು ಮೈಮೇಲೆ ಬೀಳುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಸಚಿವಾಲಯ ತಿಳಿಸಿದೆ.
ಬಾಯಾರಿಕೆಯ ಅನುಭವ ಆಗದಿದ್ದರೂ ಧಾರಾಳ ನೀರು ಕುಡಿಯಬೇಕು ಮತ್ತು ನೀರಿನಂಶ ಉಳಿಸಿಕೊಳ್ಳುವ ಹಣ್ಣು ಹಂಪಲುಗಳನ್ನು ತಿನ್ನಬೇಕು ಎಂದು ಕೂಡ ಸಚಿವಾಲಯ ತಿಳಿಸಿದೆ. ಹಾಗೆಯೇ ಜನನಿಬಿಡತೆಯಿಂದಾಗಿ ಪಾದರಕ್ಷೆ ಕಳಚಿ ಹೋಗುವ ಅಥವಾ ತುಂಡಾಗುವ ಸಾಧ್ಯತೆ ಅಧಿಕವಿದ್ದು ತೀರ್ಥಯಾತ್ರಾರ್ತಿಗಳು ತಮ್ಮ ಬ್ಯಾಗಿನಲ್ಲಿ ಹೆಚ್ಚುವರಿ ಪಾದರಕ್ಷೆಯನ್ನು ಕಾಪಿಟ್ಟುಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth