11:50 AM Wednesday 20 - August 2025

ಸಾವರ್ಕರ್ ಭಾವಚಿತ್ರಕ್ಕೆ ಅಭ್ಯಂತರ ಇಲ್ಲ, ‘ಹಿಂದೂ ರಾಷ್ಟ್ರ’ ಎಂಬ ಬ್ಯಾನರ್ ತೆಗೆಯಿರಿ: ಎಸ್ ಡಿಪಿಐ ಒತ್ತಾಯ

brahmahiri banar
17/08/2022

ಉಡುಪಿ: ಕರ್ನಾಟಕವು ವಿವಾದ, ಸಮಸ್ಯೆ, ದ್ವೇಷ ಇಲ್ಲದ ರಾಜ್ಯವಾಗಿತ್ತು. ದುರದೃಷ್ಟವಶಾತ್ ಯುಪಿ, ಎಂಪಿ, ರಾಜಸ್ತಾನದ ರೀತಿಯ ಘಟನೆಗಳು ಇಲ್ಲಿ ಆರಂಭವಾಗಿದೆ. ಬುಲ್ಡೋಜರ್, ಹಿಜಾಬ್ ದ್ವೇಷದ ಸೃಷ್ಟಿ ಉಡುಪಿಯಲ್ಲೇ ಆರಂಭವಾಯ್ತು ಎಂದು ಉಡುಪಿ ಜಿಲ್ಲಾ ಎಸ್ ಡಿಪಿಐ ಹೇಳಿದೆ.

ಬ್ರಹ್ಮಗಿರಿ ಸರ್ಕಲ್ ಹಿಂದೂ ರಾಷ್ಟ್ರ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿ ಪಿಐ ಉಪಾಧ್ಯಕ್ಷ ಶಾಹಿದ್ ಅಲಿ, ಬ್ರಹ್ಮಗಿರಿಯಲ್ಲಿ ಜೈ ಹಿಂದೂ ರಾಷ್ಡ್ರ ಬ್ಯಾನರ್ ಹಾಕಿದ್ದಾರೆ.  ಜನಪ್ರತಿನಿಧಿಗಳು ಸಂವಿಧಾನದಂತೆ ನಡೆಯುತ್ತೇವೆ ಹೇಳುತ್ತಾರೆ. ಆದರೆ, ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

sdpi

ಎಂಟು ವರ್ಷದಿಂದ ಈ ಸರ್ಕಾರದ ಆಡಳಿತವನ್ನು  ಹಿಂದೂಗಳು ನೋಡಿದ್ದಾರೆ. ಉದ್ಯೋಗ ಇಲ್ಲದೆ ಹಿಂದೂ ಯುವಕರು ಅತ್ಮಹತ್ಯೆ ಮಾಡಿಕೊಳ್ತಿದ್ದಾರೆ.  ಹಿಂದೂಗಳು‌ ಕಷ್ಟದಲ್ಲಿದ್ದಾರೆ ಅಂತ ಹೇಳುತ್ತಿದ್ದಾರೆ ಹಾಗಾದ್ರೆ ಇದು ಯಾರ ರಾಷ್ಟ್ರ? ಇದು ಮನುಸ್ನೃತಿ ರಾಷ್ಟ್ರ….! ಬ್ರಾಹ್ಮಣರು ತಮ್ಮ ಕಪಿಮುಷ್ಟಿಯಲ್ಲಿ ಭಾರತ ಇಡಲು ಯತ್ನಿಸುತ್ತಿದ್ದಾರೆ. ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತಗಳಿಸಲು ಈ ಷಡ್ಯಂತ್ರ ಎಂದು ಆರೋಪಿಸಿದರು.

ಮುಸಲ್ಮಾನರು ತಲೆ ಕೆಡಿಸಿಕೊಳ್ಳಬೇಡಿ, ಪೊಲೀಸ್ ಇಲಾಖೆ ಮೇಲೆ ನಮಗೆ ವಿಶ್ವಾಸವಿದೆ. ವಿವಾದಿತ ಬ್ಯಾನರ್ ತೆರವು ಮಾಡುವಂತೆ ಒತ್ತಾಯಿಸಿದ ಅವರು,  ಪೊಲೀಸರು ಜನರ ಭರವಸೆ ಹುಸಿ ಮಾಡಬೇಡಿ. ಉಡುಪಿಯಲ್ಲಿ ಉಸಿರುಗಟ್ಟುವ ವಾತಾವರಣ ತಿಳಿಗೊಳಿಸಿ ಎಂದು ಒತ್ತಾಯಿಸಿದರು.

ಕೆಲವೇ ದಿನಗಳಲ್ಲಿ ಡಿಸಿ‌ ಕಚೇರಿ‌ಮುಂದೆ ಪ್ರತಿಭಟನೆ ಮಾಡ್ತೇವೆ. ಹಿಂದೂ ರಾಷ್ಟ್ರ ಎಂದು ಹಾಕಿರುವ  ಬ್ಯಾನರ್ ತೆರವಿಗೆ ಒತ್ತಾಯಿಸಿದ ಅವರು,  ಸಾವರ್ಕರ್ ಭಾವಚಿತ್ರಕ್ಕೆ ದೊಡ್ಡ ಅಭ್ಯಂತರ ಇಲ್ಲ, ಶಾಲಾ ಪಾಠಗಳಲ್ಲಿ ಸಾವರ್ಕರ್ ಚಿತ್ರ ಇರಲಿಲ್ಲ,  ಈಗ ಸರ್ಕಾರ ತಮಗೆ ಬೇಕಾದವರ ಭಾವಚಿತ್ರ ಹಾಕುತ್ತಾರೆ, ನಾವು ತಲೆ ಕೆಡಿಸಿಕೊಳ್ಳಲ್ಲ, ಯಾವುದೇ ಗಡುವು ನೀಡಲ್ಲ, ಹೋರಾಟ ಮಾಡ್ತೇವೆ, ಜನರಿಗೆ ಮನವರಿಕೆ ಮಾಡ್ತೇವೆ, ಜಿಲ್ಲಾಧಿಕಾರಿ ಗೆ‌ ಮನವಿ ಮಾಡ್ತೇವೆ ಎಂದರು.

ಹಿಂದೂ ರಾಷ್ಟ್ರ ಆದರೆ ಆಗುವ ಸಮಸ್ಯೆ ಮನವರಿಕೆ ಮಾಡ್ತೇವೆ ನಾವು ಯಾರಿಗೂ ಕೌಂಟರ್ ಕೊಡಲ್ಲ, ಸಂವಿಧಾನ ವಿರೋಧಿ ಕೃತ್ಯ ಆಗದಂತೆ ತಡೆಯಿರಿ. ಹೋರಾಟದ ಮೂಲಕ ಶಾಂತಿ‌ ನೆಲೆಗೆ ಪ್ರಯತ್ನಿಸುತ್ತೇವೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version