ಚುನಾವಣಾ ಬಾಂಡ್‌ ಕೇಸ್: ವಕೀಲರಿಗೆ ಪಾವತಿಸಿದ್ದ ಶುಲ್ಕದ ವಿವರ ನೀಡಲು ಎಸ್ ಬಿಐ ನಿರಾಕರಣೆ

13/04/2024

ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಕೀಲರಾಗಿದ್ದ ಹರೀಶ್ ಸಾಳ್ವೆಗೆ ಪಾವತಿಸಲಾಗಿರುವ ಶುಲ್ಕದ ವಿವರ ನೀಡಲು ಬ್ಯಾಂಕ್ ನಿರಾಕರಿಸಿದೆ. ವಕೀಲರಿಗೆ ಪಾವತಿಸಿದ ಶುಲ್ಕವು ತೆರಿಗೆದಾರರ ಹಣ ಎಂದು ಪ್ರತಿಪಾದಿಸಲಾಗಿದೆ.
ಶುಲ್ಕದ ವಿವರ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್ ಬೋಸ್ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಎಸ್‌ಬಿಐ, ಕೋರಿದ ವಿವರಗಳನ್ನು ಆರ್‌ಟಿಐ ಕಾಯ್ದೆಯಡಿ ಸಾರ್ವಜನಿಕಗೊಳಿಸುವುದರಿಂದ ವಿನಾಯಿತಿ ಇದೆ ಎಂದು ಹೇಳಿದೆ.

ವಕೀಲರಿಗೆ ಪಾವತಿಸಿದ ಶುಲ್ಕವು ತೆರಿಗೆದಾರರ ಹಣ ಎಂದು ಅಜಯ್ ಬೋಸ್ ಪ್ರತಿಪಾದಿಸಿದ್ದು, ಎಸ್‌ಬಿಐ ಈ ಮಾಹಿತಿಯನ್ನು ಏಕೆ ಮರೆಮಾಚುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಕೋರಿದ ವಿವರಗಳು, ಬ್ಯಾಂಕ್ ನಲ್ಲಿ ವಾಣಿಜ್ಯಿಕವಾಗಿ ವಿಶ್ವಾಸ ಹೊಂದಿರುವ ಮೂರನೇ ಪಕ್ಷದ ಮಾಹಿತಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version