7:39 PM Saturday 27 - December 2025

ಟ್ರಿಬ್ಯುನಲ್ ತೀರ್ಪನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್: ‘ಇದು ತಪ್ಪಾದ ನ್ಯಾಯ’ ಎಂದ ಸರ್ವೋಚ್ಚ ನ್ಯಾಯಾಲಯ

15/07/2024

12 ವರ್ಷಗಳಿಂದ ಅಸ್ಸಾಂನಲ್ಲಿ ವಾಸಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ವಿದೇಶಿ ಎಂದಿದ್ದ ಟ್ರಿಬ್ಯುನಲ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಮಾತ್ರವಲ್ಲ, ಇದು ಅತ್ಯಂತ ತಪ್ಪಾದ ನ್ಯಾಯ ಎಂದು ಕೂಡ ಹೇಳಿದೆ.

ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ಅಹ್ ಸಾನುದ್ದೀನ್ ಅಮಾನುಲ್ಲಾ ಅವರ ನ್ಯಾಯ ಪೀಠ ಜುಲೈ 11ರಂದು ಈ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ಇಂತಹ ಸಮಸ್ಯೆ ಎದುರಿಸುತ್ತಿರುವ ಇನ್ನೂ ಅನೇಕ ಅಸ್ಸಾಮಿಗರ ಪಾಲಿಗೆ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.

2014ರಲ್ಲಿ ರಹಿಂ ಅಲಿ ಎಂಬ ಈ ವ್ಯಕ್ತಿಯ ಮನೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭೇಟಿ ನೀಡಿದ್ದರು ಮತ್ತು ನಿಮ್ಮ ನಾಗರಿಕತ್ವ ಪ್ರಶ್ನಾರ್ಹವಾಗಿದೆ ಎಂದು ತಿಳಿಸಿದ್ದರು. ಹಾಗೆಯೇ ನಿಮ್ಮ ರಾಷ್ಟ್ರೀಯತೆಯನ್ನು ದೃಢಪಡಿಸುವ ದಾಖಲೆಗಳನ್ನು ಕೊಡಿ ಎಂದು ಕೂಡ ಹೇಳಿದ್ದರು. ಆಗ ನನ್ನ ಕೈಯಲ್ಲಿ ಈಗ ದಾಖಲೆಗಳು ಇಲ್ಲ ಅದನ್ನು ಸರಿಪಡಿಸುವುದಕ್ಕೆ ಏಳು ದಿನಗಳ ಕಾಲಾವಕಾಶ ನೀಡಿ ಎಂದು ರಹೀಂ ಕೋರಿದ್ದರು. ಇದರಿಂದಾಗಿ ಪ್ರಕರಣವನ್ನು ಫಾರಿನರ್ ಟ್ರಿಬೂನಲ್ ಗೆ ವಹಿಸಿಕೊಡಲಾಗಿತ್ತು. ಈ ನಡುವೆ ಇವರ ಆರೋಗ್ಯ ಕೆಟ್ಟಿತು. ಈ ನಡುವೆ ಇವರನ್ನು ವಿದೇಶಿ ಪ್ರಜೆ ಎಂದು ಟ್ರಿಬ್ಯುನಲ್ ತೀರ್ಮಾನ ಮಾಡಿತು.

ಟ್ರಿಬ್ಯುನಲ್ ನ ತೀರ್ಪನ್ನು ರಹೀಂ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಆರಂಭದಲ್ಲಿ ಟ್ರಿಬ್ಯುನಲ್ ತೀರ್ಪಿಗೆ ಅದು ತಡೆಹರಿತಾದರೂ 2015ರಲ್ಲಿ ರಹಿಮ್ ಅರ್ಜಿಯನ್ನು ತಿರಸ್ಕರಿಸಿತು. ಅದರಿಂದಾಗಿ ಅವರು ಸುಪ್ರೀಂ ಕೋರ್ಟ್ ನ ಬಾಗಿಲು ತಟ್ಟಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version