12:41 PM Wednesday 27 - August 2025

ಎಚ್. ಸಿ. ಮಹದೇವಪ್ಪ, ಸಿದ್ದರಾಮಯ್ಯ , ಸತೀಶ್ ಜಾರಕಿಹೊಳಿ ಇರುವವರೆಗೆ  ಎಸ್ ಸಿ ಪಿ–ಟಿ ಎಸ್ ಪಿ ಹಣದಲ್ಲಿ 1 ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ: ಎಚ್. ಸಿ. ಮಹದೇವಪ್ಪ ಹೇಳಿಕೆ

h c mahadevappa
20/08/2023

ಚಾಮರಾಜನಗರ. ಎಚ್. ಸಿ. ಮಹದೇವಪ್ಪ, ಸಿದ್ದರಾಮಯ್ಯ ,ಸತೀಶ್ ಜಾರಕಿಹೊಳಿ ಇರುವವರಗೆ  ಎಸ್ ಸಿ ಪಿ  ಹಾಗೂ ಟಿ ಎಸ್ ಪಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ  ಎಂದು ಚಾಮರಾಜನಗರ ಭೀಮ ಸಂಕಲ್ಪ ಸಮಾವೇಶದಲ್ಲಿ ಸಚಿವ ಎಚ್. ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

ಎಸ್ಸಿ ಎಸ್ಟಿ ಹುಡುಗರಿಗೆ ಸುಮ್ಸುಮ್ನೆ ಕಂಟ್ರಾಕ್ಟರ್ ಲೈಸೆನ್ಸ್ ಕೊಟ್ಟಿಲ್ಲ, ಬೇರೆ ಬೇರೆ ಕಂಟ್ರಾಕ್ಟರ್ ಗಳು ಜೇಬು ತುಂಬಾ ದುಡ್ಡು ಇಟ್ಟುಕೊಳ್ಳುತ್ತಿದ್ದರು,  ಆದರೆ ನಮ್ಮವರಿಗೆ ಊಟ ಮಾಡೋಕೆ ದುಡ್ಡು ಇರುತ್ತಿರಲಿಲ್ಲ ಅವರ ಜೇಬು ಖಾಲಿ ಇರ್ತಿತ್ತು.  ಅದಕ್ಕೆ ಕಂಟ್ರಾಕ್ಟರ್ ಮೀಸಲಾತಿ ತಂದೆವು ಎಂದು ಇದೇ ವೇಳೆ ಅವರು ಹೇಳಿದರು.

ನ್ಯಾಯಕ್ಕಾಗಿ ನಾನೇ ನನ್ನ ವಿರುದ್ಧ ಧಿಕ್ಕಾರ ಕೂಗಿಸುತ್ತಿದ್ದೆ. 1998 ರಲ್ಲಿ ಇಪ್ಪತ್ತು ಸಾವಿರ ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ಸಂದರ್ಭದಲ್ಲಿ ನನ್ನ ಮನೆ ಮುಂದೆ ಧಿಕ್ಕಾರ ಕೂಗಿಸಿದ್ದೆ.  ನನ್ನ ಮನೆ ಮುಂದೆ ಕುಳಿತು ಎಚ್.ಸಿ. ಮಹದೇವಪ್ಪ ರಿಗೆ ದಿಕ್ಕಾರ ಕೂಗಿ ಅಂತ ಹೇಳುತ್ತಿದ್ದೆ.  ಆಮೇಲೆ ಕ್ಯಾಬಿನೆಟ್ ನಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದು ಹೇಳಿ, ಅಪ್ರುವಲ್ ಮಾಡಿಸುತ್ತಿದ್ದೆ.  ಈ ಗುಟ್ಟನ್ನು ನಾನು ಈಗ ಇಲ್ಲಿ  ಹೇಳುತ್ತಿದ್ದೇನೆ ಎಂದು ಚಾಮರಾಜನಗರದಲ್ಲಿ ತನ್ನ ಹಳೆಯ ರಾಜಕೀಯ ಗುಟ್ಟನ್ನು ಮಹದೇವಪ್ಪ ಬಿಚ್ಚಿಟ್ಟರು.

ಇತ್ತೀಚಿನ ಸುದ್ದಿ

Exit mobile version