10:43 PM Tuesday 18 - November 2025

ಮಹಿಳೆಯರ ಶೌಚಾಲಯದಲ್ಲಿ ಬುರ್ಖಾ ಹಾಕಿ ವಿಡಿಯೋ ರೆಕಾರ್ಡ್: ಆರೋಪಿ ಐಟಿ ಉದ್ಯೋಗಿ ಅಭಿಮನ್ಯು ಅರೆಸ್ಟ್

18/08/2023

ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಮಾಡಿರುವ ಘಟನೆ ಕೇರಳದಲ್ಲಿ ಕೊಚ್ಚಿಯಲ್ಲಿರುವ ಲುಲುಮಾಲ್​​ನಲ್ಲಿ ಈ ಘಟನೆ ನಡೆದಿದೆ. ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾನೆ. ಆತನನ್ನು ಐಟಿ ಉದ್ಯೋಗಿ ಅಭಿಮನ್ಯು(23) ಎಂದು ಗುರುತಿಸಲಾಗಿದೆ. ಈತ ಬಿಟೆಕ್ ಪದವೀಧರನಾಗಿದ್ದು ಐಟಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಮಹಿಳೆಯ ಸೋಗಿನಲ್ಲಿ ಬುರ್ಖಾ ಧರಿಸಿ ಲುಲುಮಾಲ್​ಗೆ ಬಂದಿದ್ದ. ಇದೇ ವೇಳೆ ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.

ಆತ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹೊರಬಂದು ನಿಂತಿದ್ದ, ಸಿಬ್ಬಂದಿಗೆ ಅನುಮಾನ ಬಂದು ಮಾಲ್​ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಚ್ಚಿ ಪೊಲೀಸರು ಅಭಿಮನ್ಯುವನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕೊಚ್ಚಿಯ ಪ್ರಸಿದ್ಧ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಕೊಚ್ಚಿಯಲ್ಲಿ ಕೆಲಸ ಮಾಡುವ ರೊಬೊಟಿಕ್ಸ್ ಎಂಜಿನಿಯರಿಂಗ್ ಪದವೀಧರ ಅಭಿಮನ್ಯು ಮಹಿಳೆಯಂತೆ ಪೋಸ್ ನೀಡಲು ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ನಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಅಭಿಮನ್ಯು ಮತ್ತು ಆತನ ಫೋನ್ ಮತ್ತು ಅಪರಾಧ ಮಾಡಲು ಬಳಸಿದ ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version