ವಿದ್ಯಾರ್ಥಿನಿಯರ ಎದುರು ವಾರ್ನಿಂಗ್ ಕೊಟ್ಟಿದ್ದಕ್ಕೆ ಸೆಕ್ಯುರಿಟಿ ಗಾರ್ಡ್ ನ ಬರ್ಬರ ಹತ್ಯೆ: ವಿದ್ಯಾರ್ಥಿ ಅರೆಸ್ಟ್

banglore
04/07/2024

ಬೆಂಗಳೂರು: ಕಾಲೇಜು ಯುವತಿಯರ ಮುಂದೆ ತಡೆದು ವಾರ್ನ್ ಮಾಡಿದ್ದರಿಂದ ಕೋಪಗೊಂಡ ವಿದ್ಯಾರ್ಥಿಯೊಬ್ಬ ಕಾಲೇಜು ಡಿಸಿಪ್ಲೀನರಿ ಇನ್ ಚಾರ್ಜ್ ನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.

ಅಮೃತಹಳ್ಳಿ ಸಿಂಧಿ ಕಾಲೇಜಿನಲ್ಲಿ ನಿನ್ನೆ ಕಾನ್ವೋಕೇಶನ್ ಡೇ ಆಯೋಜಿಸಲಾಗಿತ್ತು. ಕಾರ್ಯಕ್ರಮ ಶುರವಾಗಿತ್ತು. ಕಾರ್ಯಕ್ರಮ ಆರಂಭವಾದಾಗಿನಿಂದ ಅತ್ತಿಂದಿತ್ತ ತಿರುಗಾಡುತ್ತಿದ್ದ ವಿದ್ಯಾರ್ಥಿಗೆ ಡಿಸಿಪ್ಲೀನರಿ ಇನ್ ಚಾರ್ಜ್ ಜೈಕಿಶೋರ್ ರಾಯ್ ವಾರ್ನ್ ಮಾಡಿದ್ದರು ಎನ್ನಲಾಗಿದೆ.

ಕಾಲೇಜು ವಿದ್ಯಾರ್ಥಿನಿಯರ ಮುಂದೆಯೇ ವಾರ್ನ್ ಮಾಡಿದ್ದರಿಂದ ಕೋಪಗೊಂಡ ಆರೋಪಿ ವಿದ್ಯಾರ್ಥಿ ಭಾರ್ಗವ್ ಪಿಜಿಗೆ ತೆರಳಿ ಚಾಕು ತಂದಿದ್ದು, 15 ಸೆಕೆಂಡ್ ನಲ್ಲಿ ಐದಾರು ಬಾರಿ ಸೆಕ್ಯೂರಿಟಿ ಗಾರ್ಡ್ ಎದೆಗೆ ಮನಸೋ ಇಚ್ಛೆ ಇರಿದು ಹತ್ಯೆ ಮಾಡಿದ್ದಾನೆ.
ವಿದ್ಯಾರ್ಥಿ ಭಾರ್ಗವ್ ಮೂಲತಃ ಅಸ್ಸಾಂ ಮೂಲದವನಾಗಿದ್ದಾನೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹತ್ಯೆಗೀಡಾಗಿರುವ ಜೈ ಕಿಶೋರ್ ರಾಯ್ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು. ಸಿಂಧಿ ಕಾಲೇಜಿನಲ್ಲಿ ಕೆಲವು ವರ್ಷಗಳಿಂದ ಸೆಕ್ಯುರಿಟಿ ಇನ್ ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version