‘ಪಬ್ ಜಿ ಲವ್’ ಮೇಲೆ ಎಟಿಎಸ್, ಯುಪಿ ಪೊಲೀಸರ ಕಣ್ಣು: ಪಾಕ್ ಮಹಿಳೆ ಸೀಮಾಗೆ ಇದ್ಯಾ ಪಾಕಿಸ್ತಾನದ ಗೂಢಚಾರ ಸಂಸ್ಥೆ ಜೊತೆಗೆ ನಂಟು..?

18/07/2023

ಪಬ್ ಜಿ ಆಟದ ಮೂಲಕ ಪರಿಚಯಗೊಂಡ ತನ್ನ ಪ್ರಿಯಕರ ಸಚಿನ್ ಮೀನಾ ಜೊತೆಗೆ ಇರಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಯುಪಿ ಪೊಲೀಸರು ಪ್ರಶ್ನೆ ಮಾಡೋಕೇ ಶುರು ಮಾಡಿದ್ದಾರೆ. ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐನೊಂದಿಗೆ ಸಂಭಾವ್ಯ ಸಂಪರ್ಕದ ಬಗ್ಗೆ ಎಟಿಎಸ್ ಮತ್ತು ಗುಪ್ತಚರ ಬ್ಯೂರೋ (ಐಬಿ) ತನಿಖೆ ನಡೆಸುತ್ತಿದೆ.

ವಿಚಾರಣೆಯ ಸಮಯದಲ್ಲಿ ಸೀಮಾ ಹೈದರ್ ತನ್ನ ಸಹೋದರ ಪಾಕಿಸ್ತಾನಿ ಸೈನ್ಯಕ್ಕೆ ಸೇರಿದ್ದಾನೆ. ಆದರೆ ಅವನು ಇನ್ನೂ ಸೇವೆ ಸಲ್ಲಿಸುತ್ತಿದ್ದಾನೆಯೇ ಅಥವಾ ಸೈನ್ಯವನ್ನು ತೊರೆದಿದ್ದಾನೆಯೇ ಎಂದು ಖಚಿತವಾಗಿಲ್ಲ ಎಂದು ಮಾಹಿತಿ ಸಿಕ್ಕಿದೆ.
ಸೀಮಾ ಅವರ ಹೇಳಿಕೆಗಳನ್ನು ಪರಿಶೀಲಿಸಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಇಂಡಿಯಾ ಟುಡೇ ಸೀಮಾರ ಪತಿ ಗುಲಾಮ್ ಹೈದರ್ ಅವರೊಂದಿಗೆ ಮಾತನಾಡಿ, ಸೀಮಾ ಅವರ ಸಹೋದರ ಆಸಿಫ್ ಮತ್ತು ಅವರ ಚಿಕ್ಕಪ್ಪ ಗುಲಾಮ್ ಅಕ್ಬರ್ ಪಾಕಿಸ್ತಾನ ಸೇನೆಯಲ್ಲಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಕರಾಚಿಯಲ್ಲಿ ನಿಯೋಜಿತರಾಗಿರುವ ಸೀಮಾ ಅವರ ಸಹೋದರ ಆಸಿಫ್ ಅವರನ್ನು ತಾನು ಭೇಟಿಯಾಗಿದ್ದೆ. ಅವರು ಆಗಾಗ್ಗೆ ಮಾತನಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಸೀಮಾ ಅವರ ಚಿಕ್ಕಪ್ಪ ಪಾಕಿಸ್ತಾನ ಸೇನೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದು ಇಸ್ಲಾಮಾಬಾದ್ ನಲ್ಲಿ ನೆಲೆಸಿದ್ದಾರೆ ಎಂದು ಸೀಮಾರ ಪತಿ ಗುಲಾಮ್ ಹೇಳಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಯೊಂದಿಗೆ ಸಂಭಾವ್ಯ ಸಂಪರ್ಕಗಳ ಬಗ್ಗೆ ಸೀಮಾ ಹೈದರ್ ಎಟಿಎಸ್ ಮತ್ತು ಐಬಿಯ ರೇಡಾರ್ ನಲ್ಲಿದ್ದಾರೆ.

ಆಕೆಯ ಪಾಕಿಸ್ತಾನಿ ಗುರುತಿನ ಚೀಟಿಯ ಸತ್ಯಾಸತ್ಯತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಆಕೆಯ ಪಾಕಿಸ್ತಾನಿ ಪೌರತ್ವ ಗುರುತಿನ ಚೀಟಿ ಪಡೆಯುವಲ್ಲಿನ ವಿಳಂಬದ ಬಗ್ಗೆ ಉತ್ತರ ಪ್ರದೇಶ ಎಟಿಎಸ್ ತನಿಖೆ ನಡೆಸುತ್ತಿದೆ. ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸೀಮಾ ಹೈದರ್ ಈಗ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಸಚಿನ್ ಮೀನಾ ಅವರೊಂದಿಗೆ ಇದ್ದಾರೆ.
ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ತನ್ನ 22 ವರ್ಷದ ಪ್ರಿಯಕರ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಸೀಮಾ ಹೈದರ್ ಮೇ ತಿಂಗಳಲ್ಲಿ ನೇಪಾಳದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಬಸ್ ನಲ್ಲಿ ಭಾರತಕ್ಕೆ ಪ್ರವೇಶಿಸಿದ್ದರು. ಈ ಜೋಡಿ 2019 ರಲ್ಲಿ ಪಬ್ಜಿ ಮೂಲಕ ಮೊದಲ ಬಾರಿಗೆ ಪರಿಚಯಗೊಂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version