6:28 PM Thursday 16 - October 2025

ಮೊದಲ ರಾತ್ರಿಯಲ್ಲಿ ವರನಿಂದ ಮೃಗೀಯ ಲೈಂಗಿಕ ಕ್ರಿಯೆ: ಯುವತಿ ಸಾವು

kanpur
14/02/2024

ಹಮೀರ್ ಪುರ: ಮದುವೆಯ ಮೊದಲ ರಾತ್ರಿ ಕಾಮೋತ್ತೇಜಕ ಮಾತ್ರೆ ಸೇವಿಸಿದ ವರ ಮೃಗೀಯವಾಗಿ ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ ನವವಿವಾಹಿತೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ನಡೆದಿದೆ.

ಯುವತಿಯ ಪೋಷಕರು ಫೆಬ್ರವರಿ 3ರಂದು ಉರೈ ಮೂಲದ ಎಂಜಿನಿಯರ್ ಜೊತೆಗೆ ತಮ್ಮ ಮಗಳನ್ನು ಮದುವೆ ಮಾಡಿಸಿಕೊಟ್ಟಿದ್ದರು. ಫೆಬ್ರವರಿ 4ರಂದು ಯುವತಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು.

ಅಂದು ಮೊದಲನೆಯ ರಾತ್ರಿ ಕಾಮೋತ್ತೇಜಕ ಮಾತ್ರೆ ಸೇವಿಸಿದ್ದ ವರ ಯುವತಿಯ ಮೇಲೆ ಮೃಗೀಯವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಪರಿಣಾಮವಾಗಿ ಯುವತಿಯ ಆರೋಗ್ಯ ಹದಗೆಟ್ಟಿದ್ದು, ಆಕೆಯನ್ನು ಕಾನ್ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಫೆಬ್ರವರಿ 10ರಂದು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ

Exit mobile version