ಮಹಿಳೆಯರ ಸ್ವಾವಲಂಬನೆಯ ಹಾದಿಯಲ್ಲಿ ಹೊಸ ಆಶಾಕಿರಣ “ಶಕ್ತಿ”

shakti
11/06/2023

ಬೆಂಗಳೂರು:  ಸಾರಿಗೆ ಸಂಪರ್ಕವು ಉತ್ಪಾದಕ ಚಟುವಟಿಕೆಗಳನ್ನು ,ಸ್ವಾವಲಂಬನೆಯನ್ನು ವೃದ್ಧಿಸಬಲ್ಲವು ಎಂಬ ಉದಾಹರಣೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಕರುನಾಡಿನ ಮಹಿಳೆಯರನ್ನು  ಈ ನಿಟ್ಟಿನಲ್ಲಿ ಮುನ್ನಡೆಸುವ ಹಾದಿಯಲ್ಲಿ ಹೊಸ ಆಶಾಕಿರಣವೊಂದು ಉದಯಿಸಿದೆ.

ವಿಧಾನಸೌಧದ ಪೂರ್ವದ್ವಾರದ  ಮೆಟ್ಟಿಲುಗಳ  ಮುಂಭಾಗದಲ್ಲಿ ಇಂದು ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರು ಸರ್ಕಾರದ ನಗರ ಸಾರಿಗೆ,ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ “ಶಕ್ತಿ” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ,ರಾಜ್ಯದ ಇತಿಹಾಸದಲ್ಲಿಯೇ ಮಹತ್ವದ ಘಟ್ಟವೊಂದನ್ನು ದಾಖಲಿಸಿದರು.

ಚುನಾವಣೆ ಸಂದರ್ಭದಲ್ಲಿ ತಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಲು ,ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ  ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಪಡೆದು ಘೋಷಣೆ ಮಾಡಿದ್ದ ಮುಖ್ಯಮಂತ್ರಿಯವರು ,ಇದೀಗ ಘೋಷಣೆಯಾದ 21 ದಿನಗಳ ಅಲ್ಪಾವಧಿಯಲ್ಲಿಯೇ ಅನುಷ್ಠಾನ ಮಾಡಿರುವುದು. ಉಚಿತ ಪ್ರಯಾಣದ ತಮ್ಮ ಪ್ರಮಾಣವನ್ಮು ಸಾಕಾರಗೊಳಿಸಿದ್ದಾರೆ.

ಪ್ರಗತಿಯ ಚಲನೆಗೆ ಸ್ತ್ರೀ ಶಕ್ತಿಯ ಆಯಾಮವನ್ನು ಇನ್ನಷ್ಟು ಗಟ್ಟಿಯಾಗಿ ಜೋಡಿಸುವ ಕನಸು ಇದಾಗಿದೆ.ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಕೂಡ ನಾಡಿನ ಸರ್ವಾಂಗೀಣ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆ.ದೇಶದಲ್ಲಿ ಶೇ.24 ರಷ್ಟು ಮಹಿಳೆಯರು ಮಾತ್ರ ಸಾರ್ವಜನಿಕ ರಂಗದಲ್ಲಿದ್ದಾರೆ,ನೆರೆಯ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿರುವುದನ್ನು ಗಮನಿಸಿರುವ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಿರುವುದು.ರಾಷ್ಟ್ರದ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.ಅಶಕ್ತರನ್ನು ಶಕ್ತರಾಗಿಸಿದರೆ

ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ,ಕೆ.ಜೆ.ಜಾರ್ಜ್,ಕೃಷ್ಣ ಭೈರೇಗೌಡ,ಮಧು ಬಂಗಾರಪ್ಪ ,ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಸೇರಿದಂತೆ ಶಾಸಕರು,ಹಿರಿಯರ ಮುಖಂಡರು ,ಸಹಸ್ರಾರು ಸಾರ್ವಜನಿಕರು ಈ  ಸಮಾರಂಭಕ್ಕೆ ಸಾಕ್ಷಿಯಾದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version