ಬೆನ್ನಿಗೆ ಚೂರಿ ಹಾಕಿದ ನಾಯಕರ ಮೇಲೆ ಎನ್ ಸಿಪಿಯಿಂದ ‘ಉಚ್ಚಾಟನೆ’ ಅಸ್ತ್ರ: ಯಾರೆಲ್ಲಾ ಔಟ್ ಆದ್ರು..?

06/07/2023

ಎನ್ ಸಿಪಿ ಪಕ್ಷದ ವಿರುದ್ಧ ಬಂಡಾಯವೆದ್ದ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಮತ್ತು ಇತರ ಒಂಬತ್ತು ಮಂದಿಯನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಅನುಮೋದಿಸಿದೆ ಎಂದು ಪಿಸಿ ಚಾಕೊ ಹೇಳಿದ್ದಾರೆ.

ಅಜಿತ್ ಪವಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಬಂಡಾಯ ಬಣದ ಹೇಳಿಕೆಯನ್ನು ತಳ್ಳಿ ಹಾಕಿದ ಅವರು ಅಂತಹ ವಾದಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್ , ‘ನಾನು ಎನ್‌ಸಿಪಿ ಅಧ್ಯಕ್ಷ, ಯಾರಾದರೂ ಎಂದು ಹೇಳಿದರೆ ಅದು ಸಂಪೂರ್ಣವಾಗಿ ಸುಳ್ಳು. ಅದರಲ್ಲಿ ಯಾವುದೇ ಸತ್ಯವಿಲ್ಲ. ಅಜಿತ್ ಪವಾರ್ ಏನಾದರೂ ಹೇಳಿದರೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದರು. ನಾವು ಭಾರತೀಯ ಚುನಾವಣಾ ಆಯೋಗವನ್ನು ನಂಬುತ್ತೇವೆ.

ನಾವು ಏನನ್ನಾದರೂ ಹೇಳಬೇಕಾದರೆ ನಾವು ಇಸಿಐಗೆ ಹೋಗುತ್ತೇವೆ ಎಂದಿದ್ದಾರೆ.
ಇನ್ನು ತನ್ನ ನಿವೃತ್ತಿಯ ಬಗ್ಗೆ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ನನಗೆ 82 ಅಥವಾ 92 ವಯಸ್ಸೇ ಆಗಿರಲಿ ನಾನು ಇನ್ನೂ ಚುರುಕಾಗಿದ್ದೇನೆ ಎಂದು ಹೇಳಿದ್ದಾರೆ. ಬೆಂಬಲಿಗರು ಮತ್ತು 53 ಎನ್‌ಸಿಪಿ ಶಾಸಕರಲ್ಲಿ 32 ಮಂದಿಯ ಬಲದಲ್ಲಿರುವ ಅಜಿತ್ ಪವಾರ್ ತಮ್ಮ 83 ವರ್ಷದ ಮಾವನ ವಿರುದ್ಧ ವಾಗ್ದಾಳಿ ನಡೆಸಿ ಮರಾಠ ಪ್ರಬಲ ವ್ಯಕ್ತಿ ಯಾವಾಗ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಾರೆ ಎಂದು ಕೇಳಿದ್ದರು.

ನಿಮಗೆ 83 ವರ್ಷ, ನೀವು ನಿವೃತ್ತಿಯಾಗುತ್ತಿಲ್ಲವೇ..? ಪ್ರತಿಯೊಬ್ಬರಲ್ಲೂ ಅವರದೇ ಇನ್ನಿಂಗ್ಸ್ ಇರುತ್ತದೆ. ಹೆಚ್ಚು ಉತ್ಪಾದಕ ವರ್ಷಗಳು ಅಂದರೆ 25 ರಿಂದ 75 ವರ್ಷಗಳು. ನಿಮ್ಮ ಆಶೀರ್ವಾದವನ್ನು ನಮಗೆ ನೀಡಿ. ನೀವು ದೀರ್ಘಕಾಲ ಬದುಕಬೇಕೆಂದು ನಾವು ಪ್ರಾರ್ಥಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಪವಾರ್ ಅವರು ದೆಹಲಿಯ ನಿವಾಸದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದರು. ಪಿಸಿ ಚಾಕೋ, ಜಿತೇಂದ್ರ ಅವ್ಹಾದ್, ಫೌಜಿಯಾ ಖಾನ್ ಮತ್ತು ವಂದನಾ ಚವ್ಹಾಣ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version