12:16 PM Saturday 6 - December 2025

ಕಾಮುಕ ಶಿಕ್ಷಕನನ್ನು ಉರುಳಿಸಿ, ಉರುಳಿಸಿ ಥಳಿಸಿದ ವಿದ್ಯಾರ್ಥಿನಿಯರು!

crime news
15/12/2022

ಮಂಡ್ಯ: ಸಂಸ್ಕಾರವಂತನಂತೆ ವರ್ತಿಸುತ್ತಾ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಗೋಮುಖ ವ್ಯಾಘ್ರ ಕಾಮುಕನೋರ್ವನಿಗೆ ಶಾಲಾ ವಿದ್ಯಾರ್ಥಿನಿಯರು ತಕ್ಕ ಶಾಸ್ತಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ರಾಣಿಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಅಕ್ಷರಶಃ ರಾಣಿ ಚೆನ್ನಮ್ಮನಂತೆಯೇ ಉತ್ತರ ನೀಡಿದ್ದು, ಶಿಕ್ಷಕನನ್ನು ಪೊರಕೆ, ದೊಣ್ಣೆಗಳಿಂದ ಉರುಳಿಸಿ ಉರುಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಶಾಲೆಯ ಉಸ್ತುವಾರಿ ಚಿನ್ಮಯಾನಂದ ಕೆಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ. ಕೆಲವು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿಯೂ ವರ್ತಿಸಿದ್ದ ಎನ್ನಲಾಗಿದೆ. ಈತನ ಉಪಟಳ ನೋಡಿ ಸಾಕಾಗಿ ಹೋದ ವಿದ್ಯಾರ್ಥಿನಿಯರು ತಾವೇ ಪರಿಹಾರ ಕಂಡು ಕೊಳ್ಳಲು ಮುಂದಾಗಿದ್ದು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆನ್ನಲಾಗಿದೆ.

ವಿದ್ಯಾರ್ಥಿನಿಯರು ತಿರುಗಿ ಬಿದ್ದಾಗ ಅವರಿಂದ ತಪ್ಪಿಸಿಕೊಳ್ಳಲು ಶಿಕ್ಷಕ ಓಡಿದ್ದು, ಈ ವೇಳೆ ಹಾಸ್ಟೆಲ್ ಗೇಟ್ ಬಂದ್ ಮಾಡಿ, ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ವಿದ್ಯಾರ್ಥಿನಿಯರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version