11:36 AM Thursday 11 - December 2025

ಶರ್ಟ್ ಸರಿಯಾಗಿ ಹೊಲಿಯಲಿಲ್ಲ ಎಂದು ಟೈಲರ್ ನ ಹತ್ಯೆ!

09/02/2021

ಉತ್ತರಪ್ರದೇಶ: ಅಳತೆಗೆ ಸರಿಯಾಗಿ ಶರ್ಟ್ ಹೊಲಿದಿಲ್ಲ ಎಂಬ ಕಾರಣಕ್ಕೆ ಟೈಲರ್ ನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, 65 ವರ್ಷದ ಟೈಲರ್ ನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ.

ತಂದೆ ಅಬ್ದುಲ್​ ಮಜೀದ್ ಹತ್ಯೆಗೀಡಾದವರಾಗಿದ್ದಾರೆ. ಟೈಲರ್ ನ್ನು ಹತ್ಯೆ ಮಾಡಿರುವುದು ಯಾರೋ  ಅಲ್ಲ. ಟೈಲರ್ ನ ಪುತ್ರನೇ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ.  ಅಬ್ದುಲ್ ನಯೀಮ್ ಖಾನ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.

ತಂದೆ ತನ್ನ ಸರಿಯಾಗಿ ಶರ್ಟ್ ಹೊಲಿದಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪುತ್ರ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಇತ್ತೀಚಿನ ಸುದ್ದಿ

Exit mobile version