ಶಾಲಾ ಮಕ್ಕಳಿಗೆ ಹೆಬ್ಬುಲಿ ಕಟಿಂಗ್ ಮಾಡ್ಬೇಡಿ: ಸಲೂನ್ ಸಂಘಕ್ಕೆ ಪತ್ರ ಬರೆದ ಕೊಳ್ಳೇಗಾಲ ಶಿಕ್ಷಕ

hebulli cut
06/09/2023

ಚಾಮರಾಜನಗರ: ಶಾಲಾ ವಿದ್ಯಾರ್ಥಿಗಳಿಗೆ ಹೆಬ್ಬುಲಿ, ಪೆಪ್ಸಿ ಸೇರಿದಂತೆ ವಿಚಿತ್ರವಾದ ಹೇರ್ ಕಟ್ ನ್ನು ಮಾಡಬೇಡಿ ಎಂದು ಶಿಜ್ಷಕರೊಬ್ಬರು ಸವಿತಾ ಸಮಾಜದ ಸಂಘದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲದ ಬಾಪುನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಾಂತರಾಜು ಎಂಬವರು ಈ ಪತ್ರವನ್ನು ಬರೆದು ಸವಿತಾ ಸಮಾಜ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾದ ಹೇರ್ ಕಟಿಂಗ್ ಮಾಡಲು ಹೇರ್ ಸಲೂನ್ ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರ ವಿಚಿತ್ರ ಕಟಿಂಗ್ ಗೆ ಬೇಸರ: ಶಾಲಾ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಬ್ಬುಲಿ ಕಟಿಂಗ್, ಪೆಪ್ಸಿ ಕಟಿಂಗ್, ಚೈನಾ ಕಟಿಂಗ್ ಎಂದು ವಿಚಿತ್ರವಾದ ಹೇರ್ ಸ್ಟೈಲ್ ಮಾಡಿಕೊಂಡು ಬರುತ್ತಿದ್ದು ನೋಡಲು ಹಿಂಸೆ ಆಗುತ್ತಿದೆ ಎಂದು ಕೊಳ್ಳೇಗಾಲ ಸವಿತಾ ಸಮಾಜದ ಸಂಘದ ಅಧ್ಯಕ್ಷ ರಾಚಶೆಟ್ಟಿ ಅವರಿಗೆ ಕೋರಿಕೊಂಡಿದ್ದಾರೆ.

ಈಗಾಗಲೇ, ಸಾಕಷ್ಟು ಬಾರಿ ಹೇಳಿದರೂ, ಪಾಲಕರಿಗೆ ಚಿತ್ರ-ವಿಚಿತ್ರ ಕಟಿಂಗ್ ಮಾಡಿಸಬೇಡಿ ಎಂದು ತಿಳಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ರೀತಿ ಕಟಿಂಗ್ ಮಾಡಿಸಿಕೊಂಡು ಬರುವುದು ಶಾಲಾ ವಾತಾವರಣಕ್ಕೆ ಅಪಹಾಸ್ಯದ ರೀತಿ ಆಗುತ್ತಿದ್ದು ಸಲೂನ್ ಶಾಪ್ ಗಳಿಗೆ ಈ ಬಗ್ಗೆ ಆದೇಶ ಕೊಟ್ಟು ವಿದ್ಯಾರ್ಥಿಗಳಿಗೆ ಹೆಬ್ಬುಲಿ ಕಟಿಂಗ್ ಮಾಡಬಾರದು ಎಂದು ಸೂಚಿಸಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version