ಎಡಪದವು: ಶ್ರೀ ಸಾರಮಾನಿ ಕ್ಷೇತ್ರ ಮುತ್ತೂರಿನ ವರ್ಷಾವಧಿ ನೇಮೋತ್ಸವ

yedapadavu
23/01/2023

ಮಂಗಳೂರು: ತಾಲೂಕಿನ ಎಡಪದವು ಸಮೀಪದ ಶ್ರೀ ಸತ್ಯ ಸಾರಮಾನಿ ಕ್ಷೇತ್ರ ಮುತ್ತೂರು ಇಲ್ಲಿನ ಧರ್ಮದೈವ ಅಲೇರ ಪಂಜುರ್ಲಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಶನಿವಾರ ನಡೆಯಿತು.

ರಾತ್ರಿ 9ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 11 ಗಂಟೆ ಕಾನದ ಕಟದ(ಸತ್ಯಸಾರಮನಿ, ಸತ್ಯಪದ್ನಾಜಿ) ದೈವದ ಪಾತ್ರಿ ದರ್ಶನ ಬಳಿಕ ಪರಿವಾರ ದೈವಗಳ ಗಗ್ಗರ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದು ದೈವಗಳ ಆಶೀರ್ವಾದಕ್ಕೆ ಪಾತ್ರರಾದರು.

ನೇಮೋತ್ಸವದ ಪ್ರಯುಕ್ತ ಭಕ್ತರಿಗಾಗಿ ಏರ್ಪಡಿಸಿದ್ದ ಲಕ್ಕಿಡಿಪ್ ನ್ನು ಡ್ರಾ ಕೂಡ ಇದೇ ವೇಳೆ ನೆರವೇರಿಸಲಾಯಿತು. ಲಕ್ಕಿಡಿಪ್ ವಿಜೇತ ಸಂಖ್ಯೆ: ಪ್ರಥಮ: 4037 ,  ದ್ವಿತೀಯ: 4016 ,  ತೃತೀಯ  : 1123

yedapadavu

ಈ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ ಅರ್ಚಕರಾದ ಹರಿಯಪ್ಪ ಮುತ್ತೂರು, ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version