3:47 AM Wednesday 28 - January 2026

ಸಿಡಿಲು ಬಡಿದು ಮೂವರು ಸಾವು | ಓರ್ವನ ಸ್ಥಿತಿ ಗಂಭೀರ

vijayapura
05/05/2021

ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವಿಜಯಪುರ ನಗರದಲ್ಲಿ ಮೂವರು ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಂಗಳೂರು, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಇಂದು ಮಳೆಯಾಗಿದೆ.  ವಿಜಯಪುರದಲ್ಲಿ ಸಂಜೆ ಸುರಿದ ಸಿಡಿಲು ಸಹಿತ ಗಾಳಿ ಮಳೆಯ ಸಂದರ್ಭದಲ್ಲಿ  ನಗರದ ಮೊಹಮ್ಮದ್ ಮಸೀದಿ ಟೆಕ್ಕೆ ಬಳಿ ದುರ್ಘಟನೆ ನಡೆದಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಶೋಕ ರಾಮು ಕಾರಜೋಳ, ಭಾಸಾಬ್ ಕರ್ಜಗಿ, ಜಾವೀಲ್ ಹದೀಲ್ ಜಾಲಗೇರಿ ಮೃತಪಟ್ಟವರಾಗಿದ್ದಾರೆ. ಗಾಯಾಳುವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version