11:01 PM Thursday 6 - November 2025

ಜನ್ಮ ನೀಡಿದ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪುತ್ರ

santhosh
29/08/2023

ಶಿವಮೊಗ್ಗ:  ಮಗನೋರ್ವ ತನ್ನ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.

ಸುಲೋಚನಮ್ಮ(60) ತನ್ನ ಮಗನಿಂದಲೇ ಹತ್ಯೆಗೀಡಾದ ನತಾದೃಷ್ಟ ಮಹಿಳೆಯಾಗಿದ್ದಾರೆ. ಇವರ ಮಗ ಸಂತೋಷ್ (40) ಹತ್ಯೆ  ಆರೋಪಿಯಾಗಿದ್ದಾನೆ.

ನೆರೆಹೊರೆಯ ಮನೆಯವರು ಸುಲೋಚನಮ್ಮನವರಿಗೆ ಊಟ ಕೊಡಲೆಂದು ಬಂದಾಗ ಕೊಲೆ ನಡೆದಿರು ವಿಚಾರ ಬೆಳಕಿಗೆ ಬಂದಿದೆ.

ತಾಯಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸಂತೋಷ್ ಜಮೀನನಲ್ಲಿ ಮಲಗಿದ್ದ. ಸದ್ಯ ಸಂತೋಷ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚಿನ ಸುದ್ದಿ

Exit mobile version