ತುರ್ತು ಪರಿಸ್ಥಿತಿ ಹೇಳಿಕೆ: ಪ್ರಧಾನಿ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ

ಸಂಸತ್ತಿನ ಮೊದಲ ಅಧಿವೇಶನವು ಉಪ ಸ್ಪೀಕರ್ ಹುದ್ದೆ ಮತ್ತು ನೀಟ್ ವಿಷಯದ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾದ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಎನ್ ಡಿಎ ದುರ್ಬಲ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದ ಲೋಕಸಭಾ ಚುನಾವಣಾ ಫಲಿತಾಂಶಗಳೊಂದಿಗೆ ಪ್ರಧಾನಿ ಮೋದಿ ಇನ್ನೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸೋನಿಯಾ ಗಾಂಧಿ ದಿ ಹಿಂದೂ ಸಂಪಾದಕೀಯದಲ್ಲಿ ಹೇಳಿದ್ದಾರೆ.
ಏನೂ ಬದಲಾಗಿಲ್ಲ ಎಂಬಂತೆ ಪ್ರಧಾನಿ ಮುಂದುವರಿಸಿದ್ದಾರೆ. ಅವರು ಒಮ್ಮತದ ಮೌಲ್ಯವನ್ನು ಬೋಧಿಸುತ್ತಾರೆ. ಅತ್ತ ಘರ್ಷಣೆಗೆ ಬೆಲೆ ನೀಡುವುದನ್ನು ಮುಂದುವರಿಸುತ್ತಾರೆ” ಸೋನಿಯಾ ಗಾಂಧಿಯವರು ಕಿಡಿಕಾರಿದ್ದಾರೆ.
18 ನೇ ಲೋಕಸಭೆಯ ಮೊದಲ ಕೆಲವು ದಿನಗಳು ಪ್ರೋತ್ಸಾಹದಾಯಕವಾಗಿಲ್ಲ. ನಾವು ಬದಲಾದ ಮನೋಭಾವವನ್ನು ನೋಡಬಹುದು ಎಂಬ ಯಾವುದೇ ನಿರೀಕ್ಷೆ ಹುಸಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth