ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ದ.ಕ.ಜಿಲ್ಲಾ ಸದಸ್ಯರಾಗಿ ಸೌಕತ್ ಅಲಿ ಮೇನಾಲ ಆಯ್ಕೆ

ಸುಳ್ಯ: ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ.ಸಮನ್ವಯ ವೇದಿಕೆ ದಕ್ಷಿಣಕನ್ನಡ ಜಿಲ್ಲಾ ಸದಸ್ಯರಾಗಿ ಸೌಕತ್ ಅಲಿ ಮೇನಾಲ ಆಯ್ಕೆಯಾಗಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಸೌಕತ್ ಅಲಿ ಬೇಲ್ಯ ಮೇನಾಲರವರು ಸ.ಕಿ.ಪ್ರಾ. ಶಾಲೆ ಅಜ್ಜಾವರ(ಮೇನಾಲ) ಇದರ ಕಳೆದ ಅವಧಿ ಅಧ್ಯಕ್ಷರಾಗಿ ಶಾಲೆಯ ಸರ್ವೋತ್ತಮ ಅಭಿವೃದ್ಧಿಗೆ ಶ್ರಮಿಸಿ ಶಾಲೆಗೆ ಸರ್ಕಾರದಿಂದ ನೂತನ ಹೊಸ ಕಟ್ಟಡವನ್ನು ತರಿಸಿ ಶಾಲಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈಗ ನೂತನವಾಗಿ ಶಾಲಾಭಿವೃದ್ಧಿ ಸಮಿತಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದು ಮತ್ತು ಸ್ಥಳೀಯ ಯುವಕ ಮಂಡಲದ ಮಾಜಿ ಉಪಾಧ್ಯಕ್ಷರಾಗಿ ಹಾಲಿ ಕೋಶಾಧಿಕಾರಿಯಾಗಿ ಊರಿನ ಬಡವರ ಕಷ್ಟಕ್ಕೆ ಸ್ಪಂದನೆ ನೀಡುವ ಇವರು ಇದಿಗ ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ಸಮಿತಿ ಸದಸ್ಯರಾಗಿ ಇವರನ್ನು ಆಯ್ಕೆ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97