ಮಂಗಳೂರು: ಪಾಲಿಕೆಯಿಂದ ದೌರ್ಜನ್ಯಕ್ಕೊಳಗಾದ ಬೀದಿಬದಿ ವ್ಯಾಪಾರಸ್ಥರಿಂದ ಜಿಲ್ಲಾಧಿಕಾರಿಗಳ ಭೇಟಿ

mangalore.jpg
03/07/2026

ಮಂಗಳೂರು: ನಗರದ ಸಂಡೆ ಬಜಾರ್ ಸೇರಿದಂತೆ ವಿವಿಧೆಡೆ ನಗರಪಾಲಿಕೆಯು ಬೀದಿಬದಿ ವ್ಯಾಪಾರಿಗಳ ಕಾನೂನಿನ ವಿರುದ್ಧವಾಗಿ ನಗರಪಾಲಿಕೆ ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಬೀದಿಬದಿ ವ್ಯಾಪಾರಿಗಳು ಸಾಮೂಹಿಕವಾಗಿ ಜಿಲ್ಲಾಧಿಕಾರಿಗಳ ಭೇಟಿ ಮಾಡಿದರು.

ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ಬೀದಿಬದಿ ವ್ಯಾಪಾರಿಗಳು ನಮ್ಮ ಜೀವನಕ್ಕಾಗಿ ಬೀದಿಬದಿ ವ್ಯಾಪಾರ ಮಾತ್ರ ನಮಗಿರುವ ದಾರಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಆಸರೆ ಆಗಿರುವ ಬೀದಿ ವ್ಯಾಪಾರವನ್ನು ನಂಬಿ ಬದುಕುತ್ತಿದ್ದೇವೆ ನಮ್ಮ ಬದುಕುವ ಹಕ್ಕನ್ನು ರಕ್ಷಣೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಅಲವತ್ತುಕೊಂಡರು.
ಬೀದಿವ್ಯಾಪಾರಿಗಳ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೇ ಪರ್ಯಾಯ ವ್ಯವಸ್ಥೆಗಾಗಿ ಸೂಕ್ತವಾದ ಮೂರು ಕಡೆಗಳಲ್ಲಿ ಆದ್ಯತಾ ಜಾಗವನ್ನು ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳು ಸೂಚಿಸಿದಲ್ಲಿ ಪರಿಶೀಲನೆ ನಡೆಸುತ್ತೇನೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್.ಎಸ್,ಹಂಝ ಮೊಹಮ್ಮದ್,ಸಿಕಂದರ್ ಬೇಗ್,ಎಂ. ಎನ್ ಶಿವಪ್ಪ, ವಿಜಯ್ ಜೈನ್, ಗುಡ್ಡಪ್ಪ, ಶಿವಾನಂದ, ಪಕೀರ ನಾಯ್ಕ್, ನಾಗರಾಜ, ಹನುಮಂತ ನಾಯ್ಕ್,ಚಂದ್ರಶೇಖರ ರಾವ್, ಚಂದ್ರಹಾಸ್ ಪಡೀಲ್,ಅಶ್ರಫ್, ಪ್ರದೀಪ್, ಸೆಲ್ವರಾಜ್,ರಿಯಾಜ್ ಮದಕ,ಲಕ್ಕಮ್ಮ, ಗದಿಗಪ್ಪ ಮುಂತಾದವರು ಉಪಸ್ಥಿತರಿದ್ದರು.

ಸಾಲಾಗಿ ಕುಳಿತು ಜಿಲ್ಲಾಧಿಕಾರಿಗಳನ್ನು ಕಾದು ಕುಳಿತ ಬೀದಿ ವ್ಯಾಪಾರಿಗಳು:

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಹಾಗಾಗಿ ಬೀದಿಬದಿ ವ್ಯಾಪಾರಿಗಳು ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ತೀರ್ಮಾನಿಸಿ ಸಾಮೂಹಿಕ ಅರ್ಜಿ ಸಲ್ಲಿಸಲು ಬೆಳಿಗ್ಗೆ 10 ಗಂಟೆ ಸುಮಾರಿಗೆ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ ಸಂತ್ರಸ್ತ ಬೀದಿ ವ್ಯಾಪಾರಿಗಳು ಜಿಲ್ಲಾಧಿಕಾರಿಗಳು ಸರಣಿ ಸಭೆಗಳಲ್ಲಿ ಬ್ಯುಸಿ ಆಗಿದ್ದರು.ಜಿಲ್ಲಾಧಿಕಾರಿಗಳ ಹೊರಾಂಗಣದಲ್ಲಿ ಸಾಲಾಗಿ ಶಿಸ್ತಿನಲ್ಲಿ ಜಿಲ್ಲಾಧಿಕಾರಿಗಳನ್ನು ಕಾದು ಕುಳಿತರು.

ಕಚೇರಿ ಸಿಬ್ಬಂದಿಗಳ ಮೂಲಕ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್.ವಿ ಅವರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಭೆಯ ಮಧ್ಯೆ ಎದ್ದು ಬಂದು ಬೀದಿಬದಿ ವ್ಯಾಪಾರಿಗಳ ಅಹವಾಲು ಆಲಿಸಿ ಆತ್ಮೀಯತೆಯಿಂದ ಮನವಿ ಸ್ವೀಕರಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version