ತನ್ನನ್ನು ಕಿಡ್ನಾಪ್ ಮಾಡಿದ್ದಾರೆಂದು ಅಪ್ಪನಿಗೆ ಫೇಕ್ ಕಾಲ್ ಮಾಡಿ ಯಮಾರಿಸಿದ: 2 ಲಕ್ಷ ಬೇಡಿಕೆ ಇಟ್ಟ ವಿದ್ಯಾರ್ಥಿ ಕೊನೆಗೂ ಅಂದರ್

04/02/2024

ಬಿಹಾರದ ಕೈಮೂರ್ ಜಿಲ್ಲೆಯ ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ತನ್ನನ್ನು ಅಪಹರಿಸಿದ್ದಾರೆ ಎಂದು ಸುಳ್ಳು ಹೇಳಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ಈ ಕುರಿತು ಕುಟುಂಬಕ್ಕೆ ಕರೆ ಬಂದಿದ್ದು, ನಿಮ್ಮ ಮಗನನ್ನು ಅಪಹರಿಸಲಾಗಿದೆ ಎಂದು ಹೇಳಿ 2 ಲಕ್ಷ ರೂ.ಗಳ ಡಿಮ್ಯಾಂಡ್ ಮಾಡಲಾಯಿತು. ಇದೇ ವೇಳೆ ಕಾಲ್ ಮಾಡಿದ ವ್ಯಕ್ತಿಯು ಹಣವನ್ನು ತಮ್ಮ ಮಗನ ಖಾತೆಗೆ ಜಮಾ ಮಾಡಲು ಕುಟುಂಬಕ್ಕೆ ಸೂಚನೆ ನೀಡಲಾಯಿತು.
ಕುಟುಂಬವು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿತು. ಆತನನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದರು.

 

ತನಿಖೆ ನಡೆಸಿದ ಪೊಲೀಸರು ಭಾನುವಾರ ಕೋಲ್ಕತಾ ರೈಲ್ವೆ ನಿಲ್ದಾಣದಲ್ಲಿ ಯುವಕನನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ. ವಿಚಾರಣೆಯ ಸಮಯದಲ್ಲಿ, ತನ್ನ ಶಿಕ್ಷಣಕ್ಕಾಗಿ ಹಣವನ್ನು ಪಡೆಯಲು ತಾನೇ ಸ್ವತಃ ಅಪಹರಣದ ನಾಟಕ ಮಾಡಿದ್ದೇನೆ ಎಂದು ಅವನು ಒಪ್ಪಿಕೊಂಡಿದ್ದಾನೆ.‌

ತನ್ನ ತಂದೆಯು ತನ್ನ ಸಹೋದರಿಯ ಮುಂಬರುವ ಮದುವೆಗೆ ಹಣವನ್ನು ಕಾಯ್ದಿರಿಸಿದ್ದರು. ಮದುವೆಯ ನಂತರ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರು ಎಂದು ವಿದ್ಯಾರ್ಥಿಯು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version