8:47 PM Wednesday 10 - December 2025

ನನ್ನ Love ನಿಮ್ಮ ಕೈಯಾಗ ಆಯಿತಿ ರೀ ಸರ: ಉತ್ತರ ಪತ್ರಿಕೆಯಲ್ಲಿ 500 ರೂ ಇಟ್ಟು ವಿದ್ಯಾರ್ಥಿಯ ವಿಚಿತ್ರ ಬೇಡಿಕೆ!

sslc exam
19/04/2025

ಚಿಕ್ಕೋಡಿ: ವಿದ್ಯಾರ್ಥಿಯೊಬ್ಬ ಎಸ್‌ ಎಸ್‌ ಎಲ್‌ ಸಿ ಪರೀಕ್ಷಾ ಉತ್ತರ ಪತ್ರಿಕೆಯಲ್ಲಿ ತನ್ನನ್ನು ಪಾಸ್ ಮಾಡುವಂತೆ ಬೇಡಿಕೆಯಿಟ್ಟು 500 ರೂಪಾಯಿ ನೋಟು ಕೂಡ ಇಟ್ಟು ವಿಚಿತ್ರ ಪತ್ರ ಬರೆದಿರುವ ಘಟನೆ ನಡೆದಿದೆ.

ಪ್ರತಿ ವರ್ಷ SSLC ಇನ್ನಿತರ ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಪಾಸ್ ಮಾಡುವಂತೆ ಮೌಲ್ಯಮಾಪಕರ ಬಳಿ ಬೇಡಿ ಕೊಳ್ಳುವುದು ಪತ್ತೆಯಾಗುತ್ತಿದೆ. ಈ ಬಾರಿ ಬೆಳಗಾವಿಯ ಚಿಕ್ಕೋಡಿ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಲ್ಲಿ ವಿದ್ಯಾರ್ಥಿಯೊಬ್ಬನ ವಿಚಿತ್ರ ಪತ್ರ ಪತ್ತೆಯಾಗಿದೆ.

“ಸರ್ ರೀ ಮೇಡಂ ರೀ ನಿಮ್ಮ ಕಾಲ ಬೀಳತ್ತೀನೆ.. ನನ್ನ Love ನಿಮ್ಮ ಕೈಯಾಗ ಆಯಿತಿ ರೀ, ನಾ ಪೇಪರ್ ದಾಗ ಪಾಸ್ ಆದರ ಅಷ್ಟ Love ಮಾಡತ್ತೆನೆ ಅಂದಾಳ ರೀ ನನ್ನ ಹುಡುಗಿ ಈ 500 ನಿವ ಚಾ ಕುಡಿರಿ ಸರ ರೀ ನನ ಪಾಸ ಮಾಡರಿ ಅಂತ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದು ಅಂಗಲಾಚಿದ್ದಾನೆ. ಸದ್ಯ ಈ ಬರವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version