ನಿರ್ಮಾಪಕ ಕುಮಾರ್ ವಿರುದ್ಧ ಸುದೀಪ್ ಅಭಿಮಾನಿಗಳಿಂದ ಪ್ರತಿಭಟನೆ

kicha sudeep
11/07/2023

ಚಾಮರಾಜನಗರ: ಕಿಚ್ಚ ಸುದೀಪ್ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೂಡಲೇ ತಮ್ಮ ತಪ್ಪು ಆರೋಪವನ್ನು ಒಪ್ಪಿಕೊಳ್ಳಬೇಕು ಎಂದು  ಒತ್ತಾಯಿಸಿ, ಕಿಚ್ಚ ಸುದೀಪ್ ಅಭಿಮಾನಿಗಳಿಂದ ಚಾಮರಾಜನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ರು.

ನಗರದ ಭುವನೇಶ್ವರಿ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಮಾನವ ಸರಪಳಿ‌ ನಿರ್ಮಿಸಿ ಪ್ರತಿಭಟನೆ  ನಡೆಸಿದ ಅಭಿಮಾನಿಗಳು ಸುಮಾರು  ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಿರ್ಮಾಪಕ ಕುಮಾರ್ ಭಾವ ಚಿತ್ರಕ್ಕೆ  ಚಪ್ಪಲಿಯಲ್ಲಿ ಹೊಡೆದು ಧಿಕ್ಕಾರ ಕೂಗಿ ಕಿಚ್ಚಿ ಅಭಿಮಾನಿಗಳು, ನಿರ್ಮಾಪಕ ಕೂಡಲೇ ತಮ್ಮ ತಪ್ಪು ಆರೋಪವನ್ನು ಒಪ್ಪಿಕೊಳ್ಳಬೇಕು, ಕಿಚ್ಚ ಸುದೀಪ್ ಬಳಿ ಕ್ಷಮೆ ಕೇಳಬೇಕು ತಪ್ಪಿದ್ದಲ್ಲಿ ಅವರ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/CnfTzNYsUl5CgUXEpffmDp

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version