9:24 PM Thursday 29 - January 2026

ಬೆಂಗಳೂರು, ಕನ್ನಡಿಗರಿಗೆ ಅವಮಾನ ಮಾಡಿ ಕೆಲಸ ಕಳೆದುಕೊಂಡ ಉತ್ತರ ಭಾರತದ ಯುವತಿ!

sugandh sharma
23/09/2024

ಬೆಂಗಳೂರು: ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಇನ್ಸ್ ಸ್ಟಾಗ್ರಾಮ್‌ ಇನ್‌ ಫ್ಲುಯೆನ್ಸರ್‌ ಸುಗಂಧ್‌ ಶರ್ಮ ಇದೀಗ ಕೆಲಸ ಕಳೆದುಕೊಂಡಿದ್ದಾಳೆ.

ನಾವಿದ್ದರೆ ಬೆಂಗಳೂರು. ಹಾಗೇನಾದರೂ ನಾವೆಲ್ಲರೂ ಬೆಂಗಳೂರು ಬಿಟ್ಟು ಹೋದರೆ, ಇಡೀ ಊರೇ ಖಾಲಿಯಾಗುತ್ತದೆ. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತದೆ ಸುಗಂಧ್‌ ಶರ್ಮ ಸೋಷಿಯಲ್ ಮೀಡಿಯಾದಲ್ಲಿ ನಾಲಿಗೆ ಹರಿಯಬಿಟ್ಟಿದ್ದಳು.

ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸದ್ಯ ಮಹಿಳೆಯನ್ನ ಫ್ರೀಡಂ ಕಂಪನಿ ಟರ್ಮಿನೇಟ್‌ ಮಾಡಿದೆ. ಫ್ರೀಡಂ ಕಂಪನಿಗೆ ತೆರಳಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದರ ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ  ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version