ಸುಳ್ಯ: ಅಜ್ಜಾವರದಲ್ಲಿ ಜುಲೈ 14ರಂದು ‘ಕಂಡದ ಗೌಜಿ ಕೆಸರ್ದ ಪರ್ಬ—2024

ಸುಳ್ಯ: ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಮತ್ತು ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಇದರ ವತಿಯಿಂದ 3ನೇ ವರ್ಷದ ‘ಕಂಡದ ಗೌಜಿ ಕೆಸರ್ದ ಪರ್ಬ—2024 ಜುಲೈ 14 ರಂದು ಸುಳ್ಯ ತಾಲೂಕಿನ ಅಜ್ಜಾವರ ಕೊರಂಗುಬೈಲು ಗದ್ದೆಯಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ , ಅಜ್ಜಾವರ ಗ್ರಾ.ಪಂ. ಅಧ್ಯಕ್ಷರಾದ ಬೇಬಿ ಕಲ್ತಡ್ಕ, ಸಿ.ಎ. ಬ್ಯಾಂಕ್ ಸುಳ್ಯ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ವೆಂಕಟ್ ವಳಲಂಬೆ ಸಾಮಾಜಿಕ ಧುರೀಣರು, ಸುರೇಶ್ ರೈ ಸೂಡಿಮುಳ್ಳು ಅಧ್ಯಕ್ಷರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು. ಪ್ರವೀಣ ಕುಮಾರ ಎ.ಎಂ. ಅಧ್ಯಕ್ಷರು, ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಸದಸ್ಯರು, ರಾಜ್ಯ ಯುವ ಒಕ್ಕೂಟ ಬೆಂಗಳೂರು, ಅವಿನ್ ರಂಗತ್ತಮಲೆ ಕಂದಾಯ ನಿರೀಕ್ಷಕರು, ಸುಳ್ಯ, ದೇವರಾಜ್ ಮುತ್ತಾಜೆ ಯುವಜನ ಸೇವಾ ಕ್ರೀಡಾಧಿಕಾರಿ, ಸುಳ್ಯ, ಭಾಸ್ಕರ ರಾವ್ ಬಯಂಬು ಧರ್ಮದರ್ಶಿಗಳು, ಶ್ರೀ ಮಹಿಷಮರ್ದಿನೀ ದೇವಸ್ಥಾನ ಆಜ್ಞಾವರ, ರಾಜೇಶ್ ಶೆಟ್ಟಿ ಮೇನಾಲ ಅಧ್ಯಕ್ಷರು, ವ್ಯ, ಸಮಿತಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ, ಬಾಲಕೃಷ್ಣ ನ್ಯಾಕ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗದ್ದೆಯ ಮಾಲೀಕರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 5ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಮ್ಮಿ ಭಟ್ ಹಂಚಿನಮನೆ ಅಧ್ಯಕ್ಷರು, ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಂದ್ರಾ ಕೋಲ್ದಾರ್ ಅಧ್ಯಕ್ಷರು, ದ.ಕ. ಜೇನು ಸಹಕಾರ ಸಂಘ ನಿ. ಪುತ್ತೂರು, ರವಿರಾಜ್ ಕರ್ಲಪ್ಪಾಡಿ ಸದಸ್ಯರು, ಗ್ರಾಮ ಪಂಚಾಯತ್ ಅಜ್ಜಾವರ, ದಿವ್ಯ ಜಯರಾಮ ಸದಸ್ಯರು, ಗ್ರಾಮ ಪಂಚಾಯತ್ ಅಜ್ಜಾವರ, ರಾಹುಲ್ ಅಡ್ಪಂಗಾಯ ಸದಸ್ಯರು, ಗ್ರಾಮ ಪಂಚಾಯತ್ ಅಜ್ಜಾವರ, ನವ್ಯಾ ಚಂದ್ರಶೇಖರ ಅಡ್ಡಂಗಾಯ ನಿರ್ದೇಶಕರು, ಸಿ.ಎ. ಬ್ಯಾಂಕ್, ಶಶಿಧರ ಶಿರಾಜೆ ಪ್ರಗತಿಪರ ಕೃಷಿಕರು, ಪದ್ಮನಾಭ ಅತ್ಯಾಡಿ ಮುಖ್ಯೋಪಾಧ್ಯಾಯರು, ಕೆ.ಪಿ.ಯಸ್. ಗಾಂಧಿನಗರ, ರಾಘವ ಅತ್ಯಾಡಿ ಪೂರ್ವಾಧ್ಯಕ್ಷರು, ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ, ಶಿವಪ್ರಸಾದ್ ಅಪ್ಪಂಗಾಯ ಶ್ರೀನಿಧಿ ಬೋರ್ ವೆಲ್ಸ್, ಕಂಬಳಗದ್ದೆ ಭಾಗವಹಿಸಲಿದ್ದಾರೆ.
ಕಂಡದ ಗೌಜಿ ಕೆಸರ್ದ ಪರ್ಬ ಸ್ಪರ್ಧೆ ಹೀಗಿರಲಿದೆ:
* 1ರಿಂದ 4ನೇ ತರಗತಿ ಕಂಬಳ (3 ಜನ) ಕೆಸರುಗದ್ದೆ ಓಟ
* 5 ರಿಂದ 7ನೇ ತರಗತಿ ಕಂಬಳ (3 ಜನ) ಕೆಸರುಗದ್ದೆ ಓಟ 8 ರಿಂದ 10ನೇ ತರಗತಿ ಕಂಬಳ (3 ಜನ) ಕೆಸರುಗದ್ದೆ ಓಟ
* ಕಾಲೇಜು ವಿಭಾಗ ಕಂಬಳ (3 ಜನ) ಕೆಸರುಗದ್ದೆ ಓಟ, ಹಿಂಬದಿ ಓಟ
* ಮಹಿಳೆಯರಿಗೆ: ಕೆಸರುಗದ್ದೆ ಓಟ, ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ನೇಜಿ ಪಾಡ್ಡನ(ವೈಯುಕ್ತಿಕ) .
* ಪುರುಷರಿಗೆ : ಕೆಸರುಗದ್ದೆ ಓಟ, ಕಂಬಳ 3 ಜನ, ಹಗ್ಗ ಜಗ್ಗಾಟ.
* ದಂಪತಿಗಳಿಗೆ : ಉಪ್ಪುಮುಡಿ, ಅಡಿಕೆ ಹಾಳೆಯಲ್ಲಿ ಎಳೆಯುವುದು.
* ಹಿರಿಯ ನಾಗರಿಕರಿಗೆ : ಕೆಸರುಗದ್ದೆ ಓಟ.
* ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97