ಮಹಾ ಯಡವಟ್ಟು: ಬಾಲಕನಿಗೆ ಕೈ ಬೆರಳ ಬದಲು ನಾಲಗೆಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು..!

16/05/2024

ನಾಲ್ಕು ವರ್ಷ ಪ್ರಾಯದ ಬಾಲಕನ ಕೈಬೆರಳಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದ ವೈದ್ಯರು ಆತನ ನಾಲಗೆಗೆ ಶಸ್ತ್ರ ಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೋಯಿಕೋಡ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ತನ್ನ ಕೈಯ 6ನೇ ಬೆರಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯಲು ಆ ಬಾಲಕ ಆಸ್ಪತ್ರೆಗೆ ಬಂದಿದ್ದ.

ಮುಂಜಾನೆ ಮಗುವನ್ನು ಆಪರೇಷನ್ ಥಿಯೇಟರಿಗೆ ಕಳುಹಿಸಿದೆವು. ಆದರೆ ಮಗು ಹೊರಗೆ ಬರುವಾಗ ಕೈಯಲ್ಲಿ ಶತ್ರು ಚಿಕಿತ್ಸೆಯ ಯಾವುದೇ ಗುರುತು ಕಾಣಿಸಲಿಲ್ಲ. ಬದಲು ನಾಲಗೆಯ ಅಡಿ ಭಾಗದಲ್ಲಿ ಶಸ್ತ್ರ ಕ್ರಿಯೆ ಮಾಡಿದ ರೂಪದಲ್ಲಿ ಹತ್ತಿಯನ್ನು ಇಟ್ಟಿರುವುದು ಕಾಣಿಸಿತು ಎಂದು ಮಗುವಿನ ಸಂಬಂಧಿಕರಾದ ಫೈಸಲ್ ಹೇಳಿದ್ದಾರೆ.

ಶಸ್ತ್ರಕ್ರಿಯೆ ನಡೆಸಿಲ್ಲವೇ ಎಂದು ಕೇಳಿದಾಗ ಬಾಯಲ್ಲಿ ಶಸ್ತ್ರಕ್ರಿಯೆ ನಡೆಸಿರುವುದು ನೋಡಿಲ್ಲವೇ ಎಂಬ ಉತ್ತರವನ್ನು ವೈದ್ಯರು ನೀಡಿದ್ದಾರೆ. ಆದರೆ ಶಸ್ತ್ರ ಕ್ರಿಯೆ ನಡೆಸಬೇಕಾದದ್ದು ಬೆರಳಿಗೆ ಬಾಯಿಗಲ್ಲ ಎಂದು ಕುಟುಂಬದವರು ಹೇಳಿದಾಗಲೇ ವೈದ್ಯರಿಗೆ ತಾವು ಮಾಡಿರುವ ತಪ್ಪಿನ ಆರಿವಾಗಿದೆ. ಆದರೆ ನಾಲಗೆಯ ಕೆಳಗಡೆ ಸಣ್ಣದೊಂದು ಮಾಂಸ ತುಂಡು ಕಾಣಿಸಿದ್ದು ಅದನ್ನು ನಾವು ಆಪರೇಷನ್ ಮಾಡಿದ್ದೇವೆ ಎಂದು ವೈದ್ಯರು ಸಮರ್ಥಿಸಿಕೊಂಡಿದ್ದಾರೆ. ಆದರೆ ಕುಟುಂಬದವರು ಪ್ರತಿಭಟಿಸಿದಾಗ ಕೈ ಬೆರಳಿನ ಶಸ್ತ್ರ ಕ್ರಿಯೆಯನ್ನು ಕೂಡ ಆ ಬಳಿಕ ವೈದ್ಯರು ಮಾಡಿದ್ದಾರೆ. ಇದೀಗ ಈ ಪ್ರಕರಣದ ವಿರುದ್ಧ ಕೇರಳ ಸರಕಾರ ಗಂಭೀರವಾಗಿ ಪ್ರತಿಕ್ರಿಯಿಸಿದ್ದು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version