ಪತ್ನಿಯಿಂದ ಕಿರುಕುಳ: ಗೋಡೆಯಲ್ಲಿ ಡೆತ್ ನೋಟ್ ಬರೆದು ಗಂಡ ಸಾವಿಗೆ ಶರಣು

death
26/03/2024

ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತ ಟೆಕ್ಕಿಯೊಬ್ಬ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಗೋವಿಂದಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೈಯದ್ ಅಕ್ಮಲ್ ಅನ್ಸರ್ (34) ಸಾವಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಏಳು ವರ್ಷದ ಹಿಂದೆ ಸೈಯದ್ ಅಕ್ಮಲ್ ಅನ್ಸರ್, ಕುಬ್ರಾ ಜೊತೆಗೆ ವಿವಾಹವಾಗಿದ್ದರು.ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಪತಿಯನ್ನು ಪತ್ನಿ ಕುಬ್ರಾ ಯಾವಾಗಲೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದ್ದಳು ಮಾತ್ರವಲ್ಲದೆ, ಆತನನ್ನು ಹೆಚ್ಚು ಹಣಕೊಡುವಂತೆ ಪೀಡಿಸುತ್ತಿದ್ದಳು ಎನ್ನಲಾಗಿದೆ.
ಒಂದು ತಿಂಗಳ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಬಿಟಿಎಂ ಲೇಔಟ್ ನಲ್ಲಿರುವ ತವರು ಮನೆಗೆ ಮಕ್ಕಳೊಂದಿಗೆ ತೆರಳಿ ಅಲ್ಲೇ ವಾಸವಾಗಿದ್ದಳು. ಪತಿ ಫ್ಲಾಟ್ ನಲ್ಲಿ ಒಬ್ಬಂಟಿಯಾಗಿದ್ದ. ಮಾರ್ಚ್ 12 ರಂದು ಗೋಡೆ ಮೇಲೆ ಡೆತ್ ನೋಟ್ ಬರೆದು ಪತಿ ನೇಣಿಗೆ ಶರಣಾಗಿದ್ದಾನೆ.

ಪತಿ ಸಾವಿನ ನಂತರ ಆತನ ಅಂತ್ಯಸಂಸ್ಕಾರಕ್ಕೂ ಬರದೆ ಪತ್ನಿ ತನ್ನ ಮಕ್ಕಳೊಂದಿಗೆ ತಲೆ ಮರೆಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. . ಮಹಿಳೆ ಹಾಗೂ ಅವರ ಕುಟುಂಬಸ್ಥರಿಗಾಗಿ ಹುಡುಕಾಟ ನಡೆಯುತ್ತಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version