3:38 PM Thursday 23 - October 2025

ಮಹಿಳೆ ಜೊತೆಗೆ ಲಾಡ್ಜ್ ಗೆ ಬಂದಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು!

gopala
06/07/2024

ಚಿತ್ರದುರ್ಗ:  ಪರ ಸ್ತ್ರೀ ಜೊತೆಗೆ ಲಾಡ್ಜ್ ಗೆ ತೆರಳಿದ್ದ ವ್ಯಕ್ತಿಯೋರ್ವ ಕುಸಿದು ಬಿದ್ದು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ನಡೆದಿದೆ.

ಹರಿಹರ ಮೂಲದ ಗೋಪಾಲ ಟಿ. ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಪವಿತ್ರಾ ಎಂಬಾಕೆಯೊಂದಿಗೆ  ಕಳೆದ 6 ತಿಂಗಳುಗಳಿಂದ ಗೋಪಾಲ ದೈಹಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪವಿತ್ರ ಜೊತೆಗೆ ಜುಲೈ 4ರ ಮಧ್ಯಾಹ್ನ 3:11ಕ್ಕೆ ಲಾಡ್ಜ್‌ಗೆ ಬಂದಿದ್ದ. ಅದೇ ರಾತ್ರಿ ಲಾಡ್ಜಿನಲ್ಲೇ ಕುಸಿದು ಬಿದ್ದಿದ್ದ. ರಾತ್ರಿ 7:15ಕ್ಕೆ ಎದೆ ನೋವಿನಿಂದ ಕುಸಿದು ಬಿದ್ದಿದ್ದ ಎಂದು ಪವಿತ್ರ ತಿಳಿಸಿದ್ದಾಳೆ.

ಸದ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವರನ್ನು ವಿವಾಹವಾಗಿದ್ದ. ಹೆಂಡತಿ ಇದ್ದರೂ ಪರಸ್ತ್ರೀ ಸಹವಾಸಕ್ಕೆ ಬಿದ್ದಿದ್ದ ಎಂದು ತಿಳಿದು ಬಂದಿದೆ.

ಸದ್ಯ ಗೋಪಾಲ ಹಾಗೂ ಪವಿತ್ರಾ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.,  ಈ ಸಂಬಂಧ ಹೆಚ್ಚಿನ ತನಿಖೆಗೆ ಮೃತ ಗೋಪಾಲನ ಕುಟುಂಬಸ್ಥರು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version