11:08 PM Thursday 21 - August 2025

ಆಶ್ರಮದಲ್ಲಿ 15 ವರ್ಷದ ಬಾಲಕಿಯ ಮೇಲೆ ಸ್ವಾಮೀಜಿಯಿಂದ ಅತ್ಯಾಚಾರ

swamy purnananda
20/06/2023

ವಿಶಾಖಪಟ್ಟಣಂ: ಆಶ್ರಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರ ಪೊಲೀಸರು ಬಂಧಿಸಿದ್ದಾರೆ.

ವೆಂಕೋಜಿಪಾಲೆಂನಲ್ಲಿರುವ ಸ್ವಾಮಿ ಜ್ಞಾನಾನಂದ ಆಶ್ರಮ, ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮುಖ್ಯಸ್ಥ 64 ವರ್ಷ ವಯಸ್ಸಿನ ಸ್ವಾಮಿ ಪೂರ್ಣಾನಂದನ ಬಂಧಿತ ಸ್ವಾಮೀಜಿಯಾಗಿದ್ದಾನೆ.

ಈತ 15 ವರ್ಷ ವಯಸ್ಸಿನ  ಬಾಲಕಿಯ ಮೇಲೆ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈತ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಎರಡನೇ ಬಾರಿಗೆ ಬಂಧನಕ್ಕೀಡಾಗುತ್ತಿದ್ದಾನೆ. 2011ರಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿಯೂ ಈತ ಬಂಧಿತನಾಗಿದ್ದ.

ಸುಮಾರು 1 ವರ್ಷಗಳಿಂದಲೂ ಬಾಲಕಿಯು ಸ್ವಾಮೀಜಿಯ ಅಕ್ರಮ ಬಂಧನದಲ್ಲಿದ್ದಳು. ಸಂತ್ರಸ್ತೆಯ ಮೇಲೆ ಪದೇ ಪದೇ ಸ್ವಾಮೀಜಿ ಅತ್ಯಾಚಾರ ನಡೆಸಿ, ಹಿಂಸಿಸುತ್ತಿದ್ದನು. ಈತನ ಹಿಂಸೆಯಿಂದ ಕಂಗೆಟ್ಟಿದ್ದ ಬಾಲಕಿ ಜೂನ್ 13ರಂದು ಕೆಲಸದಾಕೆಯ ಸಹಾಯದಿಂದ ಸ್ವಾಮೀಜಿಯಿಂದ ತಪ್ಪಿಸಿಕೊಂಡು ತಿರುಮಲ ಎಕ್ಸ್ ಪ್ರೆಸ್ ಹತ್ತಿದ್ದಳು. ಸಹ ಪ್ರಯಾಣಿಕನ ಸಹಾಯದಿಂದ ವಿಜಯವಾಡದಲ್ಲಿರುವ ದಿಶಾ ಪೊಲೀಸರಿಗೆ ದೂರು ನೀಡಿದ್ದಾಳೆ.

ಸ್ವಾಮೀಜಿಯ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ನೊಂದ ಬಾಲಕಿಯನ್ನು ವಿಜಯವಾಡದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version