ಆದಿ ಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ ಹಾಗೂ ನಟಿ ಕೃತಿ ಸನೋನ್ ಅವರು ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಇತ್ತೀಚೆಗೆ ಆಗಮಿಸಿದ್ದರು. ಭೇಟಿಯ ಬಳಿಕ ವಿದಾಯ ಹೇಳುವಾಗ ಓಂ ರಾವುತ್ ನಟಿಯ ಕೆನ್ನೆಗೆ ಮುತ್ತಿಟ್ಟು ವಿದಾಯ ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ ಗಳು, ಟ್ರೋಲ್ ಗಳಿಗೆ ಕಾರಣವಾಗಿತ್ತು. ...