ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ರಾಜ್ಯದಲ್ಲಿ ಜನತೆಯ ಮನಸ್ಸು ದುಃಖದ ಕಾರ್ಮೋಡ ಕವಿದಂತೆ ಇದೆ. ಪುನೀತ್ ಯಾರು? ಒಬ್ಬ ನಟ, ಒಬ್ಬ ನಟ ನಿಧನರಾದಾಗ ಎಲ್ಲೋ ನಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನೇ ಕಳೆದುಕೊಂಡಷ್ಟು ದುಃಖವನ್ನು ರಾಜ್ಯದ ಜನತೆ ತೋರಿಸಿದ್ದರೆಂದರೆ, ಅಪ್ಪು ಅದೆಷ್ಟು ಪ್ರೀತಿ ಸಂಪಾದಿಸ...