ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸರೋವರದ ದೇವಾಲಯದ ರಕ್ಷಕ ಎಂದೇ ಪ್ರಸಿದ್ಧಿ ಪಡೆದಿದ್ದ ಮೊಸಳೆ ನಿನ್ನೆ ತಡ ರಾತ್ರಿ ಸಾವನ್ನಪ್ಪಿದೆ. ಬಾಬಿಯಾ ಎಂಬ ಹೆಸರಿನ ಈ ಮೊಸಳೆಯು ಸಸ್ಯಾಹಾರಿ ಮೊಸಳೆ ಎಂದೇ ಕರೆಯಲ್ಪಡುತ್ತಿತ್ತು. ಈ ಮೊಸಳೆ ದೇವರ ಪ್ರಸಾದ ಮಾತ್ರವೇ ಸೇವಿಸ...