ಶಹಾಪುರ: ಶಹಾಪುರ ಹತ್ತಿರದ ಬೆನಕನಹಳ್ಳಿ(ಜೆ) ಗ್ರಾಮದಲ್ಲಿ ನವೆಂಬರ್ 19 ರಂದು ಶ್ರೀ ಬಂಡೆ ರಂಗನಾಥ ದೇವರ ಚಟ್ಟಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಅಂದು ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಶ್ರೀ ಬಂಡೆ ರಂಗನಾಥ ಸ್ವಾಮಿಯ ಪಲ್ಲಕ್ಕಿ ಗ್ರಾಮದ ಹೊರವಲಯದಲ್ಲಿರುವ ರಾಜಶೇಖರ ತೋಟದ ಬಾವಿಗೆ ಗಂಗಾಸ್ನಾನಕ್ಕೆ ತೆರಳುವ ಮೂಲಕ ಗಂಗಾಸ್ನಾನ ಮುಗಿಸ...