ದೇಶದಲ್ಲಿ ಭಾರೀ ಸುದ್ದಿಯಾಗಿದ್ದ ರಾಜಸ್ಥಾನ ರಾಜ್ಯದ ಭರತಪುರದ ಜುನೈದ್ ಮತ್ತು ನಾಸಿರ್ ಎಂಬುವವರು ಹರ್ಯಾಣದ ಭಿವಾನಿಯಲ್ಲಿ ವಾಹನದ ಒಳಗಡೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಚಾರ್ಚ್ಶೀಟ್ ಸಲ್ಲಿಸಿದ್ದಾರೆ. ಜುನೈದ್ ಮತ್ತು ನಾಸಿರ್ ಅವರನ್ನು ಗೋರಕ್ಷಕರು ಗಂಭೀರವಾಗಿ ಹಲ್ಲೆಗ...