ಗುರುವೇ ಲೋಕದಲ್ಲಿ ಅಧರ್ಮವೇ ಇರುವಾಗ ನಾವು ಧರ್ಮವನ್ನು ಹೇಗೆ ತಾನೆ ಪ್ರಸ್ತುತ ಪಡಿಸಲು ಸಾಧ್ಯ ಎಂದು ಉಪಾಲಿಯು ಗೌತಮ ಬುದ್ಧರನ್ನು ಪ್ರಶ್ನಿಸಿದನು. ಗೌತಮ ಬುದ್ಧರು ಆಗ ಬೇರೇನೂ ವಿವರಣೆಗಳನ್ನು ನೀಡಲು ಹೋಗುವುದಿಲ್ಲ. ಮೌನವಾಗಿ ಉಪಾಲಿಯನ್ನು ಕರೆದು ಬಾ ಎಂದು ಸನಿಹದಲ್ಲಿದ್ದ ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ಕಾಡು ಬಹಳ ದಟ್ಟವಾಗ...