ಕಲಬುರ್ಗಿ: ಟೆಂಪೋ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಣ್ಣ-ತಂಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನ ಕಲಬುರ್ಗಿಯ ಶರಣಸಿರಸಗಿ ಗ್ರಾಮದ ಬಳಿಯಲ್ಲಿ ನಡೆದಿದೆ. 29 ವರ್ಷ ವಯಸ್ಸಿನ ಅಜಯ್ ರೋಡಗಿ ಹಾಗೂ 27 ವರ್ಷ ವಯಸ್ಸಿನ ಪ್ರೇಮಾ ಪ್ರವೀಣ ಮೃತಪಟ್ಟ ಅಣ್ಣ-ತಂಗಿಯಾಗಿದ್ದು, ಘಟನೆಯಲ್ಲಿ ಐವರಿಗೆ ಗಂಭೀರವಾಗಿ ಗಾಯವಾಗಿದೆ ಎಂ...
ಹುಬ್ಬಳ್ಳಿ: ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನ ಸುಮಲತಾ ಅಂಬರೀಷ್ ಸೋಲಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಮಲತಾ-ಕುಮಾರಸ್ವಾಮಿ ವಾಗ್ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಸು...
ಉತ್ತರ ಪ್ರದೇಶ: ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಜನಸಂಖ್ಯಾ ನಿಯಂತ್ರಣ ಮಸೂದೆ, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಶಾಫೀಕ್ ಉರ್ ರೆಹಮಾನ್ ಬಾರಕ್ ಆರೋಪಿಸಿದ್ದಾರೆ. ಇನ್ನೂ ಯೋಗಿ ಸರ್ಕಾರದ ಚುನಾವಣಾ ತಂತ್ರವನ್ನು ವ್ಯಂಗ್ಯ ಮಾಡಿರುವ ಅವರು, ಏರುತ...
ಉಡುಪಿ: ನಿನ್ನೆ ಉಡುಪಿ ಕರಾವಳಿ ಸರ್ಕಲ್ ಬಳಿಯಿಂದ ಎರಡೂವರೆ ವರ್ಷದ ಮಗುವನ್ನು ಅಪಹರಣ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಬಾಗಲಕೋಟೆ ಮೂಲದ ದಂಪತಿಯ ಎರಡೂವರೆ ವರ್ಷ ವಯಸ್ಸಿನ ಮಗುವನ್ನು ಭಾನುವಾರ ಪರಶು ಎಂಬಾತ ಅಪಹರಿಸಿದ್ದು, ಮಗುವಿನೊಂದಿಗೆ ಕುಂದಾಪುರ ಬಸ್ ಗೆ ಏರುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ...
ಹುಬ್ಬಳ್ಳಿ: ಸಂಶಯದ ರೋಗ ಯಾವ ಕುಟುಂಬದಲ್ಲಿರುತ್ತೋ ಆ ಕುಟುಂಬದಲ್ಲಿ ನೆಮ್ಮದಿ ಸಾಧ್ಯವಿಲ್ಲ. ಇಲ್ಲೊಬ್ಬ ಪತಿ ಮಹಾಶಯ ಪತ್ನಿಯ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ, ಆಕೆಯನ್ನು ಹತ್ಯೆಗೈದ ಘಟನೆ ಭಾನುವಾರ ತಾಲ್ಲೂಕಿನ ಕುಸಗಲ್ ಗ್ರಾಮದಲ್ಲಿ ನಡೆದಿದೆ. ಆರೋಪಿ ಪತಿ ಸೈಫ್ ಅಲಿ ಈಟಿ ಎಂಬಾತನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಹರ...
ಮೈಸೂರು: ಜೆಡಿಎಸ್ ನಿಂದ ದೂರವಾಗಿರುವ ಶಾಸಕ ಜಿ.ಟಿ.ದೇವೇಗೌಡ, ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ನಿನ್ನೆ ಅವರು ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ನಾನು ಯಾವ ಪಕ್ಷವನ್ನು ಸೇರಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದರೂ...
ಉಡುಪಿ: ನಗರದ ಕರಾವಳಿ ಬೈಪಾಸ್ ಬಳಿಯಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ದಂಪತಿಯ ಮಗುವನ್ನು ವ್ಯಕ್ತಿಯೋರ್ವ ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮುಧೋಳ ತಾಲೂಕಿನ ಅರುಣ್ ಹಾಗೂ ಭಾರತಿ ದಂಪತಿಯ ಎರಡೂವರೆ ವರ್ಷ ವಯಸ್ಸಿನ ಮಗ ಶಿವರಾಜ್ ಅಪಹರಣಕ್ಕೊಳಗಾದ ಮಗುವಾಗಿದ್ದು, ದಂಪತಿಗೆ ಪರಿಚಿತನಾಗಿರುವ ಪರಶು ಎಂಬಾತ ಕೃತ್ಯವನ...
ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿಕೊಂಡು 1 ವರ್ಷ ವಯಸ್ಸಿನ ಮಗು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದ್ದು, ನಗರದ ಹೊರವಲಯದ ನುಳ್ಳಿಪ್ಪಾಡಿ ಚೆನ್ನಿಕರೆಯ ಸತ್ಯೇಂದ್ರ-ರಂಜಿನಿ ದಂಪತಿಯ ಪುತ್ರ ಅನ್ವೇದ್ ಮೃತಪಟ್ಟ ಮಗುವಾಗಿದೆ. ಶನಿವಾರ ರಾತ್ರಿ ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದು,...
ಮೈಸೂರು: ನಟ ದರ್ಶನ್ ಹೆಸರು ದುರುಪಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ನಟ ದರ್ಶನ್ ನರಸಿಂಹರಾಜ ಉಪ ವಿಭಾಗದ ಎಸಿಪಿ ಕಚೇರಿಗೆ ಬಂದಿದ್ದು, ಈ ವೇಳೆ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ. ಯಾರೇ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಅವರ ರೆಕ್ಕೆಯನ್ನಲ್ಲ,...
ರಾಯಚೂರು: ಮನೆಯವರು ನೋಡಿದ ವರ ತನಗೆ ಇಷ್ಟವಾಗಿಲ್ಲ ಎಂದು ಹೇಳಿದ ಯುವತಿಯನ್ನು ಸ್ವಂತ ಅಣ್ಣನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆಯೊಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 22 ವರ್ಷ ವಯಸ್ಸಿನ ಚಂದ್ರಕಲಾ ಹತ್ಯೆಗೀಡಾದ ಯುವತಿಯಾಗಿದ್ದು, ಈಕೆಯ ಅಣ್ಣ...