ಮಂಗಳೂರು: ಫ್ರಿಜ್ ನಿಂದ ವಿದ್ಯುತ್ ಪ್ರವಹಿಸಿ 6 ವರ್ಷ ವಯಸ್ಸಿನ ಬಾಲಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಐವರ್ನಾಡು ಗ್ರಾಮದ ಕೈಯಲ್ ತಡ್ಕದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೆದಂಬಾಡಿಯ ಸನ್ಯಾಸಿ ಗುಡ್ಡೆ ನಿವಾಸಿ ಹೈದರಾಲಿ ಎಂಬವರ ಮಗ ಆದಿಲ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ತಾಯಿಯ ತವರ...