ಫ್ರಿಜ್ ನಿಂದ ವಿದ್ಯುತ್ ಪ್ರವಹಿಸಿ ಬಾಲಕನ ದಾರುಣ ಸಾವು
ಮಂಗಳೂರು: ಫ್ರಿಜ್ ನಿಂದ ವಿದ್ಯುತ್ ಪ್ರವಹಿಸಿ 6 ವರ್ಷ ವಯಸ್ಸಿನ ಬಾಲಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಐವರ್ನಾಡು ಗ್ರಾಮದ ಕೈಯಲ್ ತಡ್ಕದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿಯ ಸನ್ಯಾಸಿ ಗುಡ್ಡೆ ನಿವಾಸಿ ಹೈದರಾಲಿ ಎಂಬವರ ಮಗ ಆದಿಲ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ತಾಯಿಯ ತವರು ಮನೆ ಬೆಳ್ಳಾರೆಯ ಐವರ್ನಾಡಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಮಧ್ಯಾಹ್ನ ಮನೆಯಲ್ಲಿ ಹಳೆಯ ಫ್ರಿಜ್ ಮುಟ್ಟಿದಾಗ ವಿದ್ಯುತ್ ಪ್ರವಹಿಸಿದ್ದು, ಪರಿಣಾಮವಾಗಿ ಬಾಲಕ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಅದಾಗಲೇ ಮೃತಪಟ್ಟಿದ್ದ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾರಿಗೆ ಕಂಟೈನರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು; ವಾಹನ ನಜ್ಜುಗುಜ್ಜು!
ಹೊಟೇಲ್ ನಲ್ಲಿ ಜೊತೆಗಿದ್ದ ನರೇಶ್, ಪವಿತ್ರಾ ಲೋಕೇಶ್ ಮೇಲೆ ನರೇಶ್ ಪತ್ನಿಯಿಂದ ಹಲ್ಲೆಗೆ ಯತ್ನ!
ತಾಯಿಗೆ ಕರೆ ಮಾಡಿ ಕಿರುಕುಳ ನೀಡಿದವನಿಗೆ ಚಾಕುವಿನಿಂದ ಇರಿದ ಸಹೋದರರು!
ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!