ಟೈಮ್ ನಿಂದ ರಿಲಯನ್ಸ್ ಸಹಭಾಗಿತ್ವದಲ್ಲಿ ಟೈಮ್ 100 ನೆಕ್ಸ್ಟ್ ಇಂಡಿಯಾ ಬಿಡುಗಡೆ
ನ್ಯೂಯಾರ್ಕ್/ಮುಂಬೈ: ನ್ಯೂಯಾರ್ಕ್ ಮೂಲದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್ ಮತ್ತು ರಿಲಯನ್ಸ್ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಟೈಮ್ 100 ನೆಕ್ಸ್ಟ್ ಇಂಡಿಯಾ ಜಾಗತಿಕ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಈ ಮೂಲಕ 100 ಭಾರತೀಯ ಮತ್ತು ಜಾಗತಿಕ ಸಾಧಕ ರನ್ನು ಗುರುತಿಸಿ ಗೌರವಿಸಲಿದೆ.
2026 ರ ಡಿಸೆಂಬರ್ ನಲ್ಲಿ ಮುಂಬಯಿ ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಸಾಧಕರ ಪಟ್ಟಿ ಬಿಡುಗಡೆಯಾಗಲಿದೆ. ಇದರೊಂದಿಗೆ ಟೈಮ್ 100 ನೆಕ್ಸ್ಟ್ ನ ಫ್ರಾಂಚೈಸಿಯನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.
ನ್ಯೂಯಾರ್ಕ್ ನಗರದಲ್ಲಿ ನಡೆದ ಸಮಾರಂಭ ದಲ್ಲಿ ಈ ಬಗ್ಗೆ ಟೈಮ್ ಸಿಇಒ ಜೆಸ್ಸಿಕಾ ಸಿಬ್ಲಿ ಮತ್ತು ರಿಲಯನ್ಸ್ ಫೌಂಡೇಷನ್ ನ ಸ್ಥಾಪಕರು ಮತ್ತು ಅಧ್ಯಕ್ಷರಾದ ನೀತಾ ಅಂಬಾನಿಯವರು ಘೋಷಿಸಿದರು. ಕಂಪನಿಯ ಪ್ರಕಾರ, ವಿಜ್ಞಾನ, ಉದ್ಯಮ, ಕಲೆ, ಕ್ರೀಡೆ ಮತ್ತು ಅಡ್ವಕಸಿ ವಲಯದ 100 ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು.
ಟೈಮ್ ಸಂಪಾದಕರು ಇದನ್ನು ನಿರ್ವಹಿಸಲಿದ್ದು, ನಂತರ ಮುಂಬಯಿಯಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವುದು.
ಟೈಮ್ ನೆಕ್ಸ್ಟ್ 100 ಆವೃತ್ತಿಯನ್ನು ಭಾರತಕ್ಕೆ ಮೊದಲ ಬಾರಿಗೆ ತರಲು ಸಂತಸವಾಗುತ್ತಿದೆ ಎಂದು ಟೈಮ್ ಸಿಇಒ ಜೆಸ್ಸಿಕಾ ಸಿಬ್ಲಿ ಹೇಳಿದರು.
ಜಗತ್ತಿನಾದ್ಯಂತ ನಾನಾ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ಗುರುತಿಸಿ ಗೌರವಿಸಲು ನಾವು ಸಿದ್ಧರಿದ್ದು, ಇದನ್ನು ಕಾರ್ಯ ಗತಗೊಳಿಸಲು ರಿಲಯನ್ಸ್ ಸಹಭಾಗಿತ್ವ ಅವಶ್ಯಕ ವಾಗಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ರಿಲಯನ್ಸ್ ಬದ್ಧವಾಗಿದೆ ಎಂದು ನೀತಾ ಅಂಬಾನಿಯವರು ತಿಳಿಸಿದರು.
ಟೈಮ್ ನ ಕಾರ್ಯ ನಿರ್ವಾಹಕ ಸಂಪಾದಕ ಡಾನ್ ಮಸ್ಕಾಯ್ ಮಾತನಾಡಿ, ಮುಂಬರುವ ದಶಕದ ಪ್ರತಿಭಾವಂತ ನಾಯಕರನ್ನು ಗುರುತಿಸಲು ಟೈಮ್ ನೆಕ್ಸ್ಟ್ ಪ್ರಬಲ ವೇದಿಕೆಯಾಗಲಿದೆ ಎಂದರು.
ಟೈಮ್ ಸಂಸ್ಥೆ ಯು 2021 ರಿಂದಲೂ ಟೈಮ್ 100 ಇಂಪಾಕ್ಟ್ ಅವಾರ್ಡ್ ಸಮಾರಂಭವನ್ನು ಐದು ಖಂಡಗಳಲ್ಲಿ ಆಯೋಜಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























